ಬೆಂಗಳೂರು : ಮದ್ಯಪ್ರಿಯರಿಗೆ ಮತ್ತೆ ಬೆಲೆ ಏರಿಕೆಯ ಭಾರ ಹೆಗಲಿಗೇರಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಬಿಯರ್ ಬೆಲೆ ಏರಿಕೆಗೆ ಸರ್ಕಾರ ಮುಂದಾಗಿದೆ ಎಂದು ತಿಳಿದು ಬಂದಿದೆ.
ಬಿಯರ್ ದರ 10ರಿಂದ 15 ರೂಪಾಯಿ ಹೆಚ್ಚಳವಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ಕಳೆದ 15 ತಿಂಗಳಲ್ಲಿ ಎರಡು ಬಾರಿ ಮದ್ಯದ ಬೆಲೆ ಏರಿಕೆ ಮಾಡಿದರೂ ರಾಜ್ಯ ಸರ್ಕಾರ ಮತ್ತೆ ಮೂರನೇ ಬಾರಿಗೆ ಬೆಲೆ ಏರಿಕೆಗೆ ಮುಂದಾಗಿರುವುದು ಅಚ್ಚರಿಗೆ ಕಾರಣವಾಗಿದೆ.
ಹೊಸ ದರ ಅಕ್ಟೋಬರ್ ಆರಂಭದಿಂದ ಈ ಹೊಸ ದರ ಜಾರಿಗೆ ಬರುವ ಸಾಧ್ಯತೆಯಿದೆ. ಬುಲೆಟ್, ಪವರ್ ಕೂಲ್, ಲೆಜೆಂಡ್, ಆರ್.ಸಿ.ಸ್ಟ್ರಾಂಗ್, ನಾಕೌಟ್ ಮತ್ತಿತರ ಬ್ಯಾಂಡ್ ಗಳ ಬೆಲೆಯಲ್ಲಿ ಶೇ.10 ರಿಂದ ಶೇ.15ರಷ್ಟು ಬೆಲೆ ಹೆಚ್ಚಳ ಮಾಡಲು ಚಿಂತನೆ ನಡೆಸಿದೆ ಎನ್ನಲಾಗಿದೆ.
ಪ್ರತಿ ಬಾಟಲಿ ಬಿಯರ್ ಮೇಲಿನ ದರವನ್ನ 10ರಿಂದ 15 ರೂಪಾಯಿ ಏರಿಸಲು ಅಬಕಾರಿ ಇಲಾಖೆ ಪ್ರಸ್ತಾವನೆ ಸಲ್ಲಿಸಿದ್ದು, ಈ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಅಂಗೀಕರಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q