ಕಲಬುರಗಿ: ನಗರದ ಹುಮನಾಬಾದ್ ರಸ್ತೆಯಲ್ಲಿ ಆಟೋ ಟಚ್ ಆಗಿ ಬೈಕ್ ನಿಂದ ಬಿದ್ದಿದ್ದ ಸವಾರನ ಮೇಲೆ KSRTC ಬಸ್ ಹರಿದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಸೋಮಶೇಖರ್(34) ಮೃತದುರ್ದೈವಿಯಾಗಿದ್ದಾನೆ.
ಕೆಲಸ ಮುಗಿಸಿ ಹೊರಟಿದ್ದಾಗ ದುರಂತ ಸಂಭವಿಸಿದೆ. ಬೀದರ್ ಕಡೆಯಿಂದ ಕಲಬುರಗಿ ಕಡೆಗೆ KSRTC ಬಸ್ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. ಕಲಬುರಗಿ ಸಂಚಾರಿ ಪೊಲೀಸ್ ಠಾಣೆ-2ರಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.


