ಬೆಂಗಳೂರು: ಆಡುಗೋಡಿಯ ನಂಜಪ್ಪ ಲೇಔಟ್ ನಲ್ಲಿ ಬೈಕ್ ನಲ್ಲಿ ಬಂದ ಆರು ದುಷ್ಕರ್ಮಿಗಳ ತಂಡವೊಂದು ಕೇರಳದ 26 ವರ್ಷದ ಉದ್ಯಮಿಯೊಬ್ಬರನ್ನು ಅವರ ಕಾರಿನಿಂದ ಹೊರಗೆಳೆದು ಹಲ್ಲೆ ನಡೆಸಿದೆ.
ವಿಲ್ಸನ್ ಗಾರ್ಡನ್ ನಿವಾಸಿ ಬೇಸಿಲ್ ಸಿ ಕುರಿಯಾಕೋಸ್ ಎಂದು ಗುರುತಿಸಲಾಗಿದೆ. ಕಳೆದ ಎರಡು ವರ್ಷಗಳಿಂದ ನಗರದಲ್ಲಿ ಸಿಬಿಡಿ ಪ್ರದೇಶದ ಕಾಲೇಜೊಂದರಲ್ಲಿ ಕಾನೂನು ವ್ಯಾಸಂಗ ಮಾಡುತ್ತಿದ್ದು, ಆತನ ಪತ್ನಿ, ಸಹೋದರಿ ಮತ್ತು ಅವರ ಸ್ನೇಹಿತೆ ಸೇರಿ ಮೂವರು ಮಹಿಳೆಯರೊಂದಿಗೆ ಕಾರು ಚಲಾಯಿಸುತ್ತಿದ್ದರು. ಈ ವೇಳೆ ಆರೋಪಿಗಳು ಸಂತ್ರಸ್ತನ ದಾರಿಯನ್ನು ತಡೆಯುತ್ತಿದ್ದರು. ಇದರಿಂದ ಬೇಸರಗೊಂಡ ಆರೋಪಿಗಳು ಕಾರನ್ನು ಓವರ್ ಟೇಕ್ ಮಾಡಿ ನಿಲ್ಲಿಸಿದ್ದಾರೆ.
ಸಂತ್ರಸ್ತ ವ್ಯಕ್ತಿ ಕೇರಳ ನೋಂದಾಯಿತ ಕಾರನ್ನು ಓಡಿಸುತ್ತಿದ್ದ. ಆತ ಹೊರಗಿನವ ಎಂಬ ಕಾರಣಕ್ಕಾಗಿ ಜಗಳವಾಡಿದರು. ನಂತರ ಗ್ಯಾಂಗ್ ಅವರ ಮೇಲೆ ಹೆಲ್ಮೆಟ್ನಿಂದ ಹಲ್ಲೆ ಕೂಡ ನಡೆಸಿದೆ. ನಂತರ ಆತನ ನಿವಾಸದವರೆಗೂ ಹಿಂಬಾಲಿಸಿದ್ದಾರೆ. ಈ ಸಂಬಂಧ ಆಡುಗೋಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


