ದೆಹಲಿ: 2010ರಲ್ಲಿಯೇ ನಾವು ಮಹಿಳಾ ಮೀಸಲಾತಿ ಬಿಲ್ ಮಂಡಿಸಿದ್ದೆವು, ಹೀಗಾಗಿ ಇದರ ಶ್ರೇಯಸ್ಸು ಕಾಂಗ್ರೆಸ್ ಪಕ್ಷಕ್ಕೆ ಸಲ್ಲಬೇಕು ಎಂದು ರಾಜ್ಯಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಖರ್ಗೆ ಹೇಳಿಕೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದರ ಜೊತೆಗೆ ಮಹಿಳಾ ಮೀಸಲಾತಿ ಬಿಲ್ ನಲ್ಲಿ ಒಬಿಸಿ ಒಳ ಮೀಸಲಾತಿಗೆ ಮನವಿ ನೀಡುವಂತೆ ಖರ್ಗೆ ಆಗ್ರಹಿಸಿದರು.


