ಸರಗೂರು: ಸಮಾಜದ ಅಭಿವೃದ್ಧಿಗೆ ಮಠ, ಮಾನ್ಯಗಳ ಕೊಡುಗೆ ಅಪಾರವಾಗಿದ್ದು, ಬಸವಾದಿ ಶರಣರ ಆದರ್ಶದಂತೆ ‘ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು’ ನೀಡಿವೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ.ಖಂಡ್ರೆ ತಿಳಿಸಿದರು.
ಪಟ್ಟಣದ ಜೆಎಸ್ ಎಸ್ ಕಾಲೇಜಿನ ಆವರಣದಲ್ಲಿ ಭಾನುವಾರ ಮೈಸೂರು–ಚಾಮರಾಜನಗರ ಜಿಲ್ಲಾ ವೀರಶೈವ ಲಿಂಗಾಯತ ಮಠಾಧಿಪತಿಗಳ ಗೋಷ್ಠಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕ, ಶ್ರೀ ರಾಜೇಂದ್ರ ಸ್ವಾಮಿಗಳವರ ಭಕ್ತ ಬಳಗ, ಮೈಸೂರಿನ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಶತೋತ್ತರ ದಶಮಾನೋತ್ಸವ ದೀಕ್ಷಾ ಸಂಸ್ಕಾರ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
“ನವ ಭಾರತ ನಿರ್ಮಾಣದಲ್ಲಿ ಮಠ, ಮಾನ್ಯಗಳು ಸೇವೆ ಪ್ರಮುಖವಾಗಿದ್ದು, ಇಡೀ ವಿಶ್ವಕ್ಕೆ ಜ್ಞಾನ ಬೆಳಕು ನೀಡಿದ ಸುತ್ತೂರು ಗುರುಪರಂಪರೆ ಸೇವೆ ಕೊಡುಗೆ ಅವರು ನೀಡಿರುವ ತತ್ವ ಸಿದ್ಧಾಂತಗಳು ಸರ್ವಕಾಲಕ್ಕೂ ಪ್ರಸ್ತುತವಾಗಿದೆ. ಇಂತಹ ಮಹನೀಯರ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಅರ್ಥ ಪೂರ್ಣವಾಗಿ ಆಚರಣೆ ಮಾಡುವ ಮೂಲಕ ಅವರ ಕೃಪೆಗೆ ಪಾತ್ರರಾಗೋಣ. ಅವರು ಹಾಕಿಕೊಟ್ಟ ಹಾದಿಯಲ್ಲಿ ಸಾಗೋಣ. ಎಲ್ಲಾ ಜಾತಿಯವರಿಗೂ ಆಶ್ರಯ ಕೊಟ್ಟು, ಅನ್ನ, ಅಕ್ಷರ, ಆರೋಗ್ಯ ಸೇವೆ ನೀಡುತ್ತಾ ಬಂದಿರುವ ಜೆಎಸ್ ಎಸ್ ಸಂಸ್ಥೆಯ ಕಾರ್ಯವೈಖರಿ ಮೆಚ್ಚುವಂಥದ್ಧು ಶ್ಲಾಘನೀಯ” ಎಂದು ಹೇಳಿದರು.
“ಮಕ್ಕಳು ದುಶ್ಚಟಗಳಿಗೆ ಬಲಿಯಾಗಬಾರದು. ಮೊಬೈಲ್ ಸದ್ಬಳಕೆ ಮಾಡಿಕೊಳ್ಳಬೇಕು. ಉನ್ನತಮಟ್ಟದ ಗುರಿಯನ್ನಿಟ್ಟುಕೊಂಡು ಮುನ್ನುಗ್ಗಬೇಕು. ಆಗ ಸುಲಭವಾದ ಗೆಲುವು ಸಿಗಲಿದೆ. ದೈಹಿಕ, ಬೌದ್ಧಿಕವಾಗಿ ಬೆಳೆವಣಿಗೆ ಹೊಂದಿ ಬಲಿಷ್ಠವಾಗಬೇಕು. ತಮ್ಮಲ್ಲಿರುವ ಪ್ರತಿಭೆಯನ್ನು ಹೊರತರುವ ಕೆಲಸ ಮಾಡಬೇಕು. ಮಕ್ಕಳಿಗೆ ಆಸಕ್ತಿಗುಣವಾಗಿ ಓದಲು ಪ್ರೇರೇಪಣೆ ನೀಡಬೇಕು. ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಕೊಡಿಸುವಲ್ಲಿ ಪೋಷಕರು, ಶಿಕ್ಷಕರು ಮುಂದಾಗಬೇಕು” ಎಂದು ಸಲಹೆ ನೀಡಿದರು.
ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಮಕ್ಕಳಿಗೆ ಪ್ರತಿಭೆ ಪುರಸ್ಕಾರ ಹೊಸ ಚೈತನ್ಯ ತುಂಬಲಿದೆ. ಇನ್ನು ಹೆಚ್ಚಿನ ಕಲಿಕೆಗೆ ನಾಂದಿಯಾಗಲಿದೆ. ಸ್ಪೂರ್ತಿಯ ಚಿಲುಮೆಯೂ ಆಗಲಿದೆ. ಪೋಷಕರು ಮಕ್ಕಳ ಭವಿಷ್ಯ ರೂಪಿಸಬೇಕು. ಎಲ್ಲರೂ ಶಿಕ್ಷಣವಂತರಾಗಬೇಕು. ಹಿರಿಯರಿಗೆ ಗೌರವ ಕೊಡಬೇಕು. ಉತ್ತಮ ಸಂಸ್ಕಾರ ಕಲಿಯಬೇಕು ಎಂದು ತಿಳಿಸಿದರು.
ಶಾಸಕರು ಹಾಗೂ ಅರಣ್ಯ ವಸತಿ ಮತ್ತು ವಿಹಾರಧಾಮಗಳ ಅಧ್ಯಕ್ಷರು ಅನಿಲ್ ಚಿಕ್ಕಮಾದು, ಶಾಸಕ ಹೆಚ್.ಎಂ.ಗಣೇಶ್ ಪ್ರಸಾದ್, ಮಾಜಿ ಸಚಿವ ಶಿವಣ್ಣ, ಮಾಜಿ ಶಾಸಕ ಚಿಕ್ಕಣ್ಣ ಮಾತನಾಡಿದರು. ಹಂಚೀಪುರ ಮಠದ ಚನ್ನಬಸವ ಸ್ವಾಮೀಜಿ, ದಡದಹಳ್ಳಿ ಮಠದ ಷಡಕ್ಷರಿಸ್ವಾಮೀಜಿ, ಬಿಡಗಲು ಮಠದ ಮಹದೇವಸ್ವಾಮೀಜಿ, ಕಿರಿಯ ತೋಂಟದಾರ್ಯಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಆಶೀರ್ವಚನ ನೀಡಿದರು.
ಇದೇ ಸಂದರ್ಭದಲ್ಲಿ ನಂದಿನಿ ಪ್ರಮೋದ್ ಅವರು ಹೊರ ತಂದಿರುವ ದೇವರೇ ನೀಣು ಯೋಚಿಸಲೇಬೇಕಿತ್ತು ಕವನ ಸಂಕಲನವನ್ನು ಹೊರತರಲಾಯಿತು. ಡಾ.ರಾಜೇಂದ್ರ ಮಹಾಸ್ವಾಮಿಗಳ ಭಕ್ತ ಬಳಗದ ಗೌರವಾಧ್ಯಕ್ಷ ದಡದಹಳ್ಳಿ ಡಿ.ಜಿ.ಶಿವರಾಜು, ಅಧ್ಯಕ್ಷ ಮಹೇಶ್, ಅಖಿಲ ಭಾರತ ವೀರಶೈವ — ಲಿಂಗಾಯತ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಕಾಟವಾಳು ವೀರಭದ್ರಪ್ಪ, ಜಿಲ್ಲಾ ನಿಕಟ ಪೂರ್ವ ಕೋಶಾಧ್ಯಕ್ಷ ವರುಣ್ ಮಹೇಶ್, ಬಸವ ಬಳಗದ ತಾಲೂಕು ಅಧ್ಯಕ್ಷ ಹಂಚೀಪುರ ಗಣಪತಿ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಶಿವಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ಯೋಗೇಶ್, ಯುವ ಘಟಕದ ಅಧ್ಯಕ್ಷ ಪಿ.ನಂದೀಶ್, ಭಕ್ತ ಬಳಗದ ಪ್ರಧಾನ ಕಾರ್ಯದರ್ಶಿ ಬಾಡಗ ಸಿದ್ದಪ್ಪ, ಅಕ್ಕನ ಬಳಗದ ತಾಲೂಕು ಅಧ್ಯಕ್ಷೆ ಸುನಂದರಾಜು, ಭಕ್ತ ಬಳಗದ ಪದಾಧಿಕಾರಿಗಳು, ಸಮಾಜದ ಬಂಧುಗಳು ಹಾಜರಿದ್ದರು.
ಕಾರ್ಯಕ್ರಮ ಮುನ್ನ ಕೆಇಬಿ ಕಚೇರಿ ಮುಂಭಾಗದಲ್ಲಿ ಬೆಳಿರಥದಲ್ಲಿ ಕುರಿಸಿದ ಡಾ.ರಾಜೇಂದ್ರ ಶ್ರೀಗಳ ಪೋಟೋಗೆ ಹಾಗೂ ನಂದಿಧ್ವಜ ಕಂಬಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮೆರವಣಿಗೆ ದಡದಹಳ್ಳಿ ಷಡಕ್ಷರಿ ಸ್ವಾಮಿಗಳು ಹಾಗೂ ಪಡುವಲು ವೀರಕ್ತ ಮಠದ ಮಹದೇವಸ್ವಾಮಿಗಳು ಭಕ್ತದ ಬಳಗದ ಅಧ್ಯಕ್ಷ ಮಹೇಶ್ ಮಹಾಸಭಾ ವೀರಭದ್ರಪ್ಪ ಬಸವ ಬಳಗ ಗಣಪತಿ ಚಾಲನೆ ನೀಡಿದರು.
ನಂತರ ಕೆಇಬಿ ಕಚೇರಿಯಿಂದ ಮೆರವಣಿಗೆ ಶುರುವಾಗಿ ಅದೇ ಮಾರ್ಗವಾಗಿ ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು ಮಂಗಳವಾದ್ಯ ಮೂಲಕ ಮೆರವಣಿಗೆ ನಡೆಯಿತು. ಅದೇ ಬಸ್ ನಿಲ್ದಾಣದ ಮಹಾವೀರ ಸರ್ಕಲ್ ಮಾರ್ಗವಾಗಿ ಜೆಎಸ್ ಎಸ್ ಶಾಲೆಯ ಕಾರ್ಯಕ್ರಮದ ಬಳಿ ಅಂತ್ಯಗೊಂಡಿತು.
ಜೆಎಸ್ಎಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷೆ ಸುಧಾ ಮೃತ್ಯುಂಜಯಪ್ಪ ಮಾತನಾಡಿ, ನಮ್ಮ ಪತಿಯವರಾದ ಮೃತ್ಯುಂಜಯಪ್ಪ ಅವರು ನಿಂತು ಶಾಲೆಯ ಕಟ್ಟಡ ನಿರ್ಮಾಣಕ್ಕೆ ಹಾಗೂ ಇಲ್ಲಿ ಒಂದು ಜೆಎಸ್ ಎಸ್ ಶಾಲಾ ನಿರ್ಮಾಣ ಕಾರ್ಯವನ್ನು ಎಲ್ಲರ ಸಹಕಾರದಿಂದ ಪೂರ್ಣಗೊಳಿಸಲು ಶ್ರಮಿಸಿದ್ದಾರೆ. ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆಯು ಬೆಳೆದು ಇವತ್ತಿನ ದಿನಗಳಲ್ಲಿ ಸಾಕಷ್ಟು ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಒಂದು ಶೈಕ್ಷಣಿಕ ಸಂಸ್ಥೆಯಾಗಿ ಉತ್ತಮ ಶಿಕ್ಷಣವನ್ನು ನೀಡುತ್ತಾ ಈ ಭಾಗದ ಜನರಿಗೆ ಅನುಕೂಲ ಕಲ್ಪಿಸಿಕೊಟ್ಟಿದೆ ಎಂದು ಸ್ಮರಿಸಿದರು.
ಅಂದಿನ ದಿನಗಳಲ್ಲಿ ಶಾಲೆಯಲ್ಲಿ ಮಕ್ಕಳ ಹಾಜರಾತಿ ಕೊರತೆ ಇದ್ದರೂ ಸಹ ಅವತ್ತಿನ ದಿನಗಳಲ್ಲಿನ ಶಿಕ್ಷಕರನ್ನು ಮರೆಯುವಂತಿಲ್ಲ ಅವರ ಶ್ರಮ ತುಂಬಾನೇ ಇದೆ. ಅವರು ಶಾಲೆಯ ಸಮಯ ಮುಗಿದ ನಂತರ ಅಕ್ಕ ಪಕ್ಕದ ಹಳ್ಳಿಗಳಿಗೆ ಹೋಗಿ ಅಲ್ಲಿನ ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿ ಎಂದು ಮನವೊಲಿಸಿ ಶಾಲೆಗೆ ಕರೆತಂದು ಸೇರಿಸುವ ಮೂಲಕ ಶಿಕ್ಷಣ ಸಂಸ್ಥೆಯ ಬೆಳವಣಿಗೆ ಕಾರಣರಾಗಿದ್ದಾರೆ ಎಂದು ತಿಳಿಸಿದರು.
ಭಕ್ತ ಬಳಗ ಗೌರವಾಧ್ಯಕ್ಷ ದಡದಹಳ್ಳಿ ಜಿ.ಶಿವರಾಜಪ್ಪ ಮಾತನಾಡಿ, ಎಸ್.ಎಸ್. ಶಿಕ್ಷಣ ಸಂಸ್ಥೆಯು ಉತ್ತಮ ಪರಿಸರ ಶಿಕ್ಷಣ ನೀಡುತ್ತಿದೆ. ಶಾಲೆಯ ಮಕ್ಕಳು ಒಳ್ಳೆಯ ಶಿಕ್ಷಣವನ್ನು ಕಲಿತು ಉನ್ನತ ಸ್ಥಾನಕ್ಕೆ ಬೆಳೆಯ ಬೇಕು. ಓದುವುದರ ಜೊತೆಗೆ ಕ್ರೀಡಾ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಶಾಲೆಗೆ ಶಿಕ್ಷಕರಿಗೆ ಊರಿಗೆ ಒಳ್ಳೆಯ ಹೆಸರು ತಂದು ಕೊಡಬೇಕು ಎಂದು ಸಲಹೆ ನೀಡಿದರು.
ನಮ್ಮೂರಿನ ಹೆಣ್ಣು ಮಕ್ಕಳಿಗೆ ಶಾಲೆಯನ್ನು ತೆರೆಯಲು ಎಲ್ಲರ ಊರಿನವರ ಸಹಕಾರದಿಂದ ಪರಮ ಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ಆಶೀರ್ವಾದದಿಂದ ಅವರ ಮಾರ್ಗದರ್ಶನದಲ್ಲಿ ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆಯನ್ನು ತೆರೆಯಲು ಅವಕಾಶ ಮಾಡಿಕೊಟ್ಟರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC



