ಸರಗೂರು: ಪಂಚದಾಸೋಹಗಳ ಮೂಲಕ ಸಮಾಜದ ಅಭಿವೃದ್ಧಿಗಾಗಿ ಜೀವನವನ್ನೇ ಮುಡಿಪಾಗಿಟ್ಟ ಸುತ್ತೂರು ಮಹಾಸಂಸ್ಥಾನ ಮಠದ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳ ಕೊಡುಗೆ ಇಡೀ ವಿಶ್ವಕ್ಕೆ ಮಾದರಿ ಎಂದು ಡಾ.ರಾಜೇಂದ್ರ ಮಹಾಸ್ವಾಮಿಗಳ ಭಕ್ತ ಬಳಗ ಗೌರವಾಧ್ಯಕ್ಷ ಹಾಗೂ ನಿಕಟಪೂರ್ವ ಅಧ್ಯಕ್ಷ ದಡದಹಳ್ಳಿ ಡಿ.ಜಿ.ಶಿವರಾಜು ಹೇಳಿದರು.
ಪಟ್ಟಣದ ಜೆಎಸ್ ಎಸ್ ಶಿವರಾತ್ರಿ ಶಿವಾನುಭವ ಮಂಗಳ ಮಂಟಪದಲ್ಲಿ ಮುಂಭಾಗದಲ್ಲಿ ಗುರುವಾರ ದಂದು ಜಗದ್ಗುರು ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಶತೋತ್ತರ ದಶಮಾನೋತ್ಸವ ಅ.26ರಂದು ಕಾರ್ಯಕ್ರಮ ನಡೆಯಲಿದ್ದು, ಪ್ರಚಾರ ಕಾರ್ಯಕ್ರಮದ ರಥಕ್ಕೆ ಚಾಲನೆ ನೀಡಿ ಮಾತನಾಡಿದರು.
ಇಡೀ ವಿಶ್ವಕ್ಕೆ ಜ್ಞಾನ ಬೆಳಕು ನೀಡಿದ ಸುತ್ತೂರು ಗುರುಪರಂಪರೆ ಸೇವೆ ಕೊಡುಗೆ ಅವರು ನೀಡಿರುವ ತತ್ವ ಸಿದ್ಧಾಂತಗಳನ್ನು ಸರ್ವಕಾಲಕ್ಕೂ ಪ್ರಸ್ತುತವಾಗಿದೆ. ಇಂತಹ ಮಹನೀಯರ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಅರ್ಥ ಪೂರ್ಣವಾಗಿ ಆಚರಣೆ ಮಾಡುವ ಮೂಲಕ ಅವರ ಕೃಪೆಗೆ ಪಾತ್ರರಾಗೋಣ ಎಂದು ತಿಳಿಸಿದರು.
ಇಂದು ಮತ್ತು ನಾಳೆ ಸರಗೂರು ತಾಲೂಕಿನ ಎಲ್ಲಾ ಗ್ರಾಮಗಳಿಗೆ ಹೋಗಿ ಪ್ರಚಾರಕ್ಕೆ ಮಾಡಲಾಗುವುದು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಬರುತ್ತಾರೆ ಎಂದರು.
ಮೈಸೂರು–ಚಾಮರಾಜನಗರ ಜಿಲ್ಲಾ ವೀರಶೈವ ಲಿಂಗಾಯತ ಮಠಾಧಿಪತಿಗಳ ಗೋಷ್ಟಿ ಹಾಗೂ ದೀಕ್ಷಾ ಸಂಸ್ಕಾರ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರವನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾ ತಾಲ್ಲೂಕು ಘಟಕ, ಶ್ರೀರಾಜೇಂದ್ರ ಸ್ವಾಮಿಗಳವರ ಭಕ್ತ ಬಳಗ ಜೆಎಸ್ ಎಎಸ್, ಶಿಕ್ಷಣ ಸಂಸ್ಥೆಗಳು ಸರಗೂರು ಇವರ ಸಹಯೋಗದಲ್ಲಿ ಪಟ್ಟಣದ ಜೆಎಸ್‌ಎಸ್‌ಎಸ್ ಶಾಲಾ ಆವರಣದಲ್ಲಿ ಈ ಕಾರ್ಯಕ್ರಮದ ದಿವ್ಯ ಸಾನಿದ್ಯ ಸುತ್ತೂರು ಶ್ರೀಕ್ಷೇತ್ರದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ವಹಿಸಲಿದ್ದಾರೆ ಎಂದು ತಿಳಿಸಿದರು.
ಹಂಚೀಪುರ ಮಠದ ಕಿರಿಯ ತೋಂಟದಾರ್ಯ ಸ್ವಾಮೀಜಿ ಮಾತನಾಡಿ, ಮನುಕುಲದ ಒಳಿತಿಗಾಗಿ ಜೀವನವನ್ನೇ ಅರ್ಪಿಸಿ ಶಿಕ್ಷಣ, ಆರೋಗ್ಯ, ಜ್ಞಾನ, ಅನ್ನ ದಾಸೋಹದ ಮೂಲಕ ಕೋಟ್ಯಂತರ ಜನರಿಗೆ ಜ್ಞಾನದ ಬೆಳಕು ಹಚ್ಚಿದ್ದರು. ದೇಶದಲ್ಲಿ ಸಾವಿರಾರು ಮಠಗಳಿವೆ, ಅಂತಹ ಮಠಗಳಲ್ಲಿಸದಾ ಸಮಾಜದ ಏಳ್ಗೆಗಾಗಿ ಶ್ರಮಿಸುತ್ತಿರುವ ಸುತ್ತೂರು ಮಠದ ಶ್ರೀ ರಾಜೇಂದ್ರ ಶ್ರೀಗಳ ಕೂಡುಗೆ ವಿಶೇಷ ಎಂದರು.
ಶಾಸಕರು ಹಾಗೂ ಅರಣ್ಯ ವಸತಿ ಮತ್ತು ವಿಹಾರಧಾಮಗಳ ಅಧ್ಯಕ್ಷರು ಅನೀಲ್ ಚಿಕ್ಕಮಾದು, ಮುಖ್ಯ ಅಥಿಗಳಾಗಿ ಸಂಸದರಾದ ಸುನಿಲ್ ಬೋಸ್, ಶಾಸಕ ರಾದ ಹೆಚ್.ಎಂ.ಗಣೇಶ್ ಪ್ರಸಾದ್, ಮಾಜಿ ಸಚಿವ ಶಿವಣ್ಣ, ಮಾಜಿ ಶಾಸಕರಾದ ಚಿಕ್ಕಣ್ಣ, ಸೇರಿದಂತೆ ಜನಪ್ರತಿಧಿನಿಗಳು ಹಾಗೂ ಗಣ್ಯಾತಿ ಗಣ್ಯರು ಭಾಗವಹಿಸಲಿದ್ದು, ಈ ಪವಿತ್ರ ಕಾರ್ಯಕ್ರವನ್ನು ಯಶಸ್ವಿಗೊಳಿಸಲು ಪ್ರತಿಯೊಬ್ಬರೂ ಆಗಮಿಸ ಬೇಕೆ೦ದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ, ಡಾ ರಾಜೇಂದ್ರ ಮಹಾಸ್ವಾಮಿಗಳ ಭಕ್ತ ಬಳಗ ಅಧ್ಯಕ್ಷ ಡಾ.ಮಹೇಶ್, ಅಖಿಲ ಭಾರತ ವೀರಶೈವ –ಲಿಂಗಾಯತ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಕಾಟವಾಳು ವೀರಭದ್ರಪ್ಪ, ಬಸವ ಬಳಗದ ತಾಲ್ಲೂಕು ಅಧ್ಯಕ್ಷ ಹಂಚೀಪುರ ಗಣಪತಿ, ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ಯೋಗೇಶ್,ಯುವ ಘಟಕದ ಅಧ್ಯಕ್ಷ ಪಿ. ನಂದೀಶ್, ಬಕ್ತಿ ಬಳಗ ಪ್ರದಾನ ಕಾರ್ಯದರ್ಶಿ ಬಾಡಗ ಸಿದ್ದಪ್ಪ, ಅಕ್ಕನ ಬಳಗದ ತಾಲ್ಲೂಕು ಅಧ್ಯಕ್ಷೆ ಸುನಂದರಾಜು, ಕಾರ್ಯದರ್ಶಿ ಬಸವರಾಜು, ಮುಖಂಡರು ಪರಶಿವ, ಜಯಕುಮಾರ್, ನಿಜಗುಣ, ಕಸಾಪ ಅಧ್ಯಕ್ಷ ಕೆಂಡಗಣ್ಣಸ್ವಾಮಿ, ಜೆಎಸ್ ಎಸ್ ಪ್ರಾಂಶುಪಾಲರು ಮಹದೇವಸ್ವಾಮಿ, ಜಯಣ್ಣ, ಕೃಷ್ಣಮೂರ್ತಿ, ಇನ್ನೂ ಮುಖಂಡರು ಸೇರಿದಂತೆ ಜೆಎಸ್ಎಸ್ ಶಾಲೆಯ ಶಿಕ್ಷಕರು ವೃಂದದವರು ಭಾಗಿಯಾಗಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC



