ರಾಷ್ಟ್ರೀಯ ಹೆದ್ದಾರಿ ಬೆಂಗಳೂರು-ಕೃಷ್ಣಗಿರಿ ಚಿನ್ನಾರ್ ಬಳಿ ಸೀಮಂತ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ ಆಗುತ್ತಿದ್ದಾಗ ಮಿನಿ ಬಸ್ ವೊಂದು ಪಲ್ಟಿ ಹೊಡೆದಿದ್ದು, ಹದಿನೈದು ಮಂದಿ ಗಾಯಗೊಂಡಿದ್ದಾರೆ.
ಹೆದ್ದಾರಿಯಲ್ಲಿ ರಸ್ತೆಗೆ ಪೈಂಟ್ ಕೆಲಸ ಮಾಡಲಾಗುತ್ತಿತ್ತು. ಇದನ್ನು ಗಮನಿಸದೆ ಮಿನಿ ಬಸ್ ಚಾಲಕ ಅತಿವೇಗವಾಗಿ ಬಂದಿದ್ದು, ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಮಿನಿ ಬಸ್ ಪಲ್ಟಿ ಹೊಡೆದಿದೆ. ಬಸ್ ಪಲ್ಟಿ ಹೊಡೆದ ರಭಸಕ್ಕೆ ಬ್ರಿಡ್ಜ್ ಕೆಳಗೆ ಬಿದ್ದಿದೆ. ಮಿನಿ ಬಸ್ ನಲ್ಲಿದ್ದ 12 ಮಂದಿ ಹಾಗೂ ಹೆದ್ದಾರಿ ಕೆಲಸ ಮಾಡುತ್ತಿದ್ದ ಮೂವರು ಗಾಯಗೊಂಡಿದ್ದಾರೆ.
ಬಸ್‌ನಲ್ಲಿ ಸಿಲುಕಿದ್ದ ಗಾಯಾಳುಗಳನ್ನು ರಕ್ಷಿಸಿ, ಕೂಡಲೇ ಕೃಷ್ಣಗಿರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಬ್ರಿಡ್ಜ್ ಕೆಳಗೆ ಬಿದ್ದ ಬಸ್ಸನ್ನು ಮೇಲಕ್ಕೆತ್ತಿದ್ದಾರೆ. ಸ್ಥಳಕ್ಕೆ ಕೃಷ್ಣಗಿರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


