ಮಧ್ಯಪ್ರದೇಶದಲ್ಲಿ ಅಚ್ಚರಿಯ ಘಟನೆಯೊಂದು ಜರುಗಿದ್ದು, ಕುಲದೇವತೆ ಎಂದು ನೂರಾರು ವರ್ಷಗಳಿಂದ ಡೈನೋಸಾರ್ ಮೊಟ್ಟೆ ಪೂಜಿಸಿದ್ದಾರೆ. ವಾಸ್ತವವಾಗಿ ರೈತ ಕುಟುಂಬವು ಕೆಲವು ಕಲ್ಲಿನ ಚೆಂಡುಗಳನ್ನು ಪೂಜಿಸುತ್ತಿತ್ತು. ಆದರೆ ಅವರಿಗೆ ಈ ಬಗ್ಗೆ ತಿಳಿಸಿದಿರಲೇ ಇಲ್ಲ.
ಕೊನೆಗೆ ಇವುಗಳ ಬಗ್ಗೆ ಅನುಮಾನಗೊಂಡ ಕೆಲವರು ವಿಜ್ಞಾನಿಗಳಿಗೆ ಮಾಹಿತಿ ನೀಡಿದ್ದು, ಅವುಗಳನ್ನು ಪರೀಕ್ಷಿಸಿದಾಗ ಲಕ್ಷಾಂತರ ವರ್ಷಗಳಷ್ಟು ಹಳೆಯದಾದ ಡೈನೋಸಾರ್ ಮೊಟ್ಟೆ ಎಂದು ತಿಳಿದು ಬಂದಿದೆ.
ಇದನ್ನು ಕೇಳಿ ಮನೆಯವರು ಬೆಚ್ಚಿಬಿದ್ದಿದ್ದು, ಆ ಮೊಟ್ಟೆಗಳನ್ನು ಕುಟುಂಬವು ಹಲವು ವರ್ಷಗಳಿಂದ ಸುರಕ್ಷಿತವಾಗಿಟ್ಟಿದ್ದೇ ವಿಶೇಷ ಎಂದು ಸಂಶೋಧಕರು ತಿಳಿಸಿದ್ದಾರೆ.


