ತಿಂಡಿ ಬೀದಿಯ 200 ಮೀಟರ್ ಉದ್ದದ 5 ಮೀಟರ್ ಅಗಲದ ಕಾಂಕ್ರೀಟ್ ರಸ್ತೆಯ ಮೇಲ್ಬಾಗಕ್ಕೆ 3 ಎಂಎಂ ಕೆಂಗಂದು ಬಣ್ಣ ಹಾಕಲಾಗುತ್ತಿದೆ ಎಂದು, ದಕ್ಷಿಣ ವಲಯದ ಆಯುಕ್ತ ಜಯರಾಮ್ ರಾಯಪುರ ತಿಳಿಸಿದರು. ಈ ಕಾಮಗಾರಿ ಶೇ 70 ರಷ್ಟು ಪೂರ್ಣಗೊಂಡ ಬಳಿಕ ರಸ್ತೆಗೆ ಕೆಂಗಂದು ಬಣ್ಣದ ಪಾಲೀಶ್ ಮಾಡಲಾಗುತ್ತದೆ ಎಂದು ಹೇಳಿದರು.
ತಿಂಡಿ ಬೀದಿಯ ಅಭಿವೃದ್ಧಿ ಕಾಮಗಾರಿಗಳನ್ನು ಬುಧವಾರ ಪರಿಶೀಲಿಸಿದ ಅವರು, 5 ಮೀಟರ್ ಕಾಂಕ್ರೀಟ್ ರಸ್ತೆ, ಎರಡೂ ಬದಿ 3 ಮೀಟರ್ ಪಾದಚಾರಿ ಮಾರ್ಗ, 25 ವಿದ್ಯುತ್ ದೀಪಗಳ ಅಳವಡಿಕೆ ಕೆಲಸ ಸೇರಿದಂತೆ ಬೇರೆ ಬೇರೆ ಅಭಿವೃದ್ಧಿ ಕಾರ್ಯಗಳನ್ನು ಶೀಘ್ರ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಒಳಚರಂಡಿ ಸಂಪರ್ಕ, ನೀರು ಸರಬರಾಜು ಸಂಪರ್ಕ, ಮಳೆ ನೀರುಗಾಲುವೆ ಸಂಪರ್ಕ, ಕೇಬಲ್ ಗಳ ಲೈನ್ ಡಕ್ಟ್ ಹಾಗೂ ಕೇಬಲ್ ಚೇಂಬರ್ ಗೆ ಸಂಬಂಧಿಸಿದ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ ಎಂದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


