ಬೆಳಗಾವಿ: ಬಿಳಿಕಿ ಅವರೊಳ್ಳಿ ಗ್ರಾಮದ ಕಾಡುಕೋಣವನ್ನು ಕೊಂದ ಆರೋಪಿಗಳನ್ನು ಬಂಧಿಸುವಲ್ಲಿ ಬೆಳಗಾವಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಅವರೊಳ್ಳಿ ಗ್ರಾಮದ ಸೋಮನಿಂಗ್ ರವಳಪ್ಪ ಕುಡೊಳ್ಳಿ ಮತ್ತು ಪ್ರಭು ಸದಪ್ಪ ಕುಡೋಳಿ ಆರೋಪಿಗಳಾಗಿದ್ದು ಕಾಡು ಕೋಣವನ್ನು ಬೇಟೆಯಾಡಿದ್ದರು. ಇವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಪ್ರಕರಣವನ್ನು ದಾಖಲಿಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಬೆಳಗಾವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಕಲ್ಲೋಲಕರ ರವರ ಮಾರ್ಗದರ್ಶನದಲ್ಲಿ ಸಹಾಯಕ ನಾಗರಗಾಳಿ ಉಪ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಮಲ್ಲಿನಾಥ ಕುಶನಾಳ ಇವರ ಮಾರ್ಗದರ್ಶನದಲ್ಲಿ ವಲಯ ಅರಣ್ಯ ಅಧಿಕಾರಿಗಳು ಗೋಲಿಹಳ್ಳಿ ವಾಣಿಶ್ರೀ ಹೆಗಡೆ ಉಪ ವಲಯ ಅರಣ್ಯ ಅಧಿಕಾರಿಗಳಾದ ಅಶೋಕ್ ಬ ಹೂಲಿ, ಸಂಜಯ್ ಮಗದುಮ, ಕುಮಾರಸ್ವಾಮಿ ಹಿರೇಮಠ, ಗಸ್ತು ವನಪಾಲಕರಾದ ವೀರಪ್ಪ ಕರಲಿಂಗನವರ, ಅಜಯ್ ಭಾಸ್ಕರಿ, ಗಿರೀಶ ಮೆಕ್ಕೆದ, ಬಿ ಎ ಮಾಡಿಕ ಮತ್ತು ಗೋಲಿಹಳ್ಳಿ ವಲಯದ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8123382149 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


