ಬೆಂಗಳೂರು: ಅಗ್ನಿವೀರ್ ಯೋಜನೆ ಹೆಸರಲ್ಲಿ ಸೇನೆಗೆ ಸೇರುವ ಆಸೆಯಲ್ಲಿ ದೇಶದ ವಿವಿಧ ಪ್ರದೇಶದಲ್ಲಿ ನೇಮಕಾತಿಗಳು ನಡೆದಿದೆ. ಸೇನೆ ನೇಮಕಾತಿಗಾಗಿ ಒಂದಷ್ಟು ರ್ಯಾಲಿ ಹಾಗೂ ನೇಮಕಾತಿ ಪ್ರಕ್ರಿಯೆಗಳು ನಡೆದಿವೆ.
ಇದರ ನಡುವೆ ದೇಶದ ವಿವಿಧ ಪ್ರದೇಶದಲ್ಲಿ ಸೇನಾ ರ್ಯಾಲಿ ನಡೆದ ಸ್ಥಳದಲ್ಲೇ ಸೇನೆಗೆ ಸೇರಲು ಆಸೆ ಪಡುವವರನ್ನು ವಂಚಿಸಲಾಗಿದೆ. ಕಳೆದ ಫೆಬ್ರವರಿಯಲ್ಲಿ ಒಂದಷ್ಟು ಜನರು ಬೆಂಗಳೂರಿನ ಅಶೋಕ ನಗರದಲ್ಲಿರುವ ಭಾರತೀಯ ಸೇನೆಯ ಕಚೇರಿಗೆ ಆಗಮಿಸಿ ತಮಗೆ ಅಪಾಯಿಂಟ್ಮೆಂಟ್ ಆಗಿದೆ ಎಂದು ಲೆಟರ್ ಸಹಿತ ಬಂದ ಘಟನೆ ನಡೆದಿದೆ.


