ತನ್ನ ದಢೂತಿ ದೇಹದಿಂದಲೇ ದೇಶಾದ್ಯಂತ ಖ್ಯಾತಿ ಗಳಿಸಿರುವ, ಡಬ್ಲ್ಯೂಡಬ್ಲ್ಯೂಇನಲ್ಲಿ ಭಾರತವನ್ನು ಪ್ರತಿನಿಧಿಸಿದ ಕುಸ್ತಿಪಟು ದಿ ಗ್ರೇಟ್ ಖಲಿ ವಿಶ್ವದಲ್ಲೇ ಅತಿ ಕುಬ್ಜ ಮಹಿಳೆ ಎನಿಸಿರುವ ಜ್ಯೋತಿ ಆಮ್ಗ ಯನ್ನು ಒಂದೇ ಕೈಯಲ್ಲಿ ಎತ್ತಿ ಆಡಿಸಿದ ವೀಡಿಯೊ ಈಗ ಭಾರೀ ವೈರಲ್ ಆಗಿದೆ.
ಮಹಾರಾಷ್ಟ್ರದವರಾದ ಜ್ಯೋತಿ ಆಮ್ಗೆ(30) ಅವರು ಕೇವಲ 2.3 ಅಡಿ ಎತ್ತರವಾಗಿದ್ದು, ಜಗತ್ತಿನಲ್ಲೇ ಅತಿ ಕುಬ್ಜ ಮಹಿಳೆ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಇವರು ಗಿನ್ನಿಸ್ ದಾಖಲೆಗೂ ಭಾಜನರಾಗಿದ್ದಾರೆ. ಜ್ಯೋತಿ ಆಮ್ಗೆ ಹಾಗೂ ದಿ ಗ್ರೇಟ್ ಖಲಿ ಅವರು ಇತ್ತೀಚೆಗೆ ಭೇಟಿಯಾಗಿದ್ದು, ಗ್ರೇಟ್ ಖಲಿ ಅವರು ತಮಾಷೆಗಾಗಿ ಅವರನ್ನು ಒಂದೇ ಕೈಯಲ್ಲಿ ಎತ್ತಿ ಆಡಿಸಿದ್ದಾರೆ.
ಆದರೆ, ತಮಾಷೆಗಾಗಿ ಒಂದೇ ಕೈಯಲ್ಲಿ ಮಗುವಿನಂತೆ ಎತ್ತಿ ಆಡಿಸಿದ ವೀಡಿಯೊ ವೈರಲ್ ಆದ ಬೆನ್ನಲ್ಲೇ ಗ್ರೇಟ್ ಖಲಿ ವಿರುದ್ಧ ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ನಾನು ನಿಮ್ಮನ್ನು ನಾಗ್ಪುರಕ್ಕೆ ಕಳುಹಿಸಿಬಿಡುತ್ತೇನೆ” ಎಂದು ತಮಾಷೆ ಮಾಡಿದ್ದಾರೆ. ಇದರಿಂದ ಜ್ಯೋತಿ ಆಮ್ಗೆ ಅವರು ನಾಚಿ ನೀರಾಗಿದ್ದಾರೆ. ಆದರೆ ಹಲವರು ಬ್ಯಾಡ್ ಟಚ್ ಎಂದು ಕಮೆಂಟ್ ಮಾಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296