ಪಪುವಾ ನ್ಯೂಗಿನಿ ಅಕ್ಷರಶಃ ಸ್ಮಶಾನ ಮೌನವಾಗಿದೆ. ಇದ್ದಕ್ಕಿದ್ದಂತೆಯೇ ಬೆಟ್ಟವೊಂದು ಭೂಕುಸಿದು ಎಲ್ಲರೂ ನೆಲಸಮವಾಗಿದ್ದಾರೆ. ಇಲ್ಲಿಯವರೆಗೆ ಸುಮಾರು 2 ಸಾವಿರಕ್ಕೂ ಅಧಿಕ ಜನರು ನೆಲ ಸಮಾಧಿಯಾಗಿದ್ದಾರೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ.
ಪಪುವಾ ನ್ಯೂಗಿನಿ ಹಳ್ಳಿಯೊಂದರ ಚಿತ್ರಣವೇ ಬದಲಾಗಿದೆ. ಬೆಟ್ಟವೊಂದರ ಕುಸಿತದಿಂದ ಹಳ್ಳಿ, ಮನೆ, ಹೊಲ, ಶಾಲೆ ಎಲ್ಲವೂ ನೆಲಸಮವಾಗಿದೆ. ಸದ್ಯ ಸಮಾಧಿಯಾದವರ ಮೃತದೇಹವನ್ನು ಹೊರತೆಗೆಯಲು ರಾಷ್ಟ್ರೀಯ ವಿಪತ್ತು ನಿರ್ವಹಣ ತಂಡ ಅಲ್ಲಿ ಬೀಡುಬಿಟ್ಟು ಕೆಲಸ ಮಾಡುತ್ತಿದೆ.
ಎಂಗಾ ಪ್ರಾಂತ್ಯದ ದೂರದ ಗುಡ್ಡಗಾಡಿನ ಮುಂಗಾಲೋ ಪರ್ವತದ ಒಂದು ಭಾಗ ಕುಸಿದಿದೆ. ಆ ಭಾಗದಲ್ಲಿ ವಾಸಿಸುತ್ತಿದ್ದ ಬಹುತೇಕ ಜನರು ಸಮಾಧಿಯಾಗಿದ್ದಾರೆ. ಸದ್ಯ 2 ಸಾವಿರಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296