ಮಧುಗಿರಿ: ರಂಜಾನ್ ಹಬ್ಬ ಪವಿತ್ರವಾದ ಹಬ್ಬವಾಗಿದ್ದು ಹಬ್ಬವು ಸಹೋದರತ್ವವನ್ನು ಸಾರುತ್ತದೆ ಎಂದು ಶಾಸಕರಾದ ಕೆ.ಎನ್.ರಾಜಣ್ಣ ತಿಳಿಸಿದರು.
ಪಟ್ಟಣದ ಶಿರಾ ರಸ್ತೆಯ ಸಮೀಪವಿರುವ ಈದ್ಗಾ ಮೈದಾನದಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ಜಮಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಧುಗಿರಿಯಲ್ಲಿ ಹಿಂದೂ ಮುಸ್ಲಿಂ ಬಾಂಧವರು ಸಹೋದರತೆಯಿಂದ ಬಾಳ್ವೆಯನ್ನು ನಡೆಸುತ್ತಿದ್ದಾರೆ ಎಂದರು.
ರಂಜಾನ್ ಹಬ್ಬವನ್ನು ಒಂದು ತಿಂಗಳ ಕಾಲ ಉಪವಾಸ ಇರುವುದರ ಮೂಲಕ ಭಕ್ತಿಯಿಂದ ಆಚರಿಸಲಾಗುತ್ತದೆ. ಎಲ್ಲರ ಒಳಿತಿಗಾಗಿ ವಿಶೇಷವಾಗಿ ಪ್ರಾರ್ಥನೆಯನ್ನು ಸಲ್ಲಿಸಿರುವುದು ಹಾಗೂ ಪ್ರಪಂಚದಲ್ಲಿನ ಅಶಾಂತಿಯನ್ನು ತೊರೆದು ಶಾಂತಿಯು ಮತ್ತು ನೆಮ್ಮದಿಯಿಂದ ಎಲ್ಲಾರೂ ಬಾಳುವಂತಹ ವಾತಾವರಣ ಸೃಷ್ಟಿಯಾಗಬೇಕಾಗಿದೆ. ಯಾವುದೇ ಜಾತಿ, ಧರ್ಮದವರಾಗಿದ್ದರೂ ಸಹ ನಾವೆಲ್ಲಾರೂ ಭಾರತ ದೇಶದ ಮಕ್ಕಳು ಹಾಗೂ ಹಕ್ಕುದಾರರಾಗಿದ್ದು ಸಹೋದರತೆಯಿಂದ ಬಾಳ್ವೆಯನ್ನು ನಡೆಸೋಣ. ಅವರಣದಲ್ಲಿ ನಮಾಜ್ ಮಾಡಲು ಅನುಕೂಲವಾಗುವಂತೆ ಮುಂದಿನ ದಿನಗಳಲ್ಲಿ ಶೆಡ್ ನ್ನು ನಿರ್ಮಿಸಿಕೊಡಲಾಗುವುದು ಎಂದರು.
ಉಪವಿಭಾಗಾಧಿಕಾರಿ ಗೂಟೂರು ಶಿವಪ್ಪ, ಸಿಪಿಐ ಹನುಮಂತರಾಯಪ್ಪ, ಪಿಎಸ್‌ಐ ಚಂದ್ರಶೇಖರ್, ಜಾಮೀಯ ಮಸೀದಿ ಅಧ್ಯಕ್ಷರಾದ ಅಲೀಮ್, ಉಪಾಧ್ಯಕ್ಷ ಜಾಫರ್ ಸಾದಿಕ್, ಪದಾಧಿಕಾರಿಗಳಾದ ಬಾಬ ಫಕ್ರುದ್ದೀನ್, ಎಸ್.ಕೆ.ಕರೀಂ, ಅಯೂಬ್, ಅಲೀಂ, ಎಂ.ಆರ್.ಖಲೀಲ್, ಫಯಾಜ್, ಮನ್ಸೂ, ಪಾಜು ಮತ್ತಿತರರು ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


