ಹೈದರಾಬಾದ್: ಆಟೋ ಚಾಲಕನೊಬ್ಬ ಪತ್ನಿಯ ತಲೆಯನ್ನು ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. 41 ವರ್ಷದ ಪತ್ನಿ ಪುಷ್ಪಲತಾ ಮೃತ ದುರ್ದೈವಿ. ಪತಿ ಪತ್ನಿಯನ್ನು ಹತ್ಯೆ ಮಾಡಿ ಹರಿತವಾದ ಚಾಕುವಿನಿಂದ ತಲೆಯನ್ನು ಕತ್ತರಿಸಿರುವ ಭಯಾನಕ ಘಟನೆ ವರದಿಯಾಗಿದೆ.
ಸರ್ಕಾರಿ ವಸತಿ ಗೃಹದಲ್ಲಿ ವಾಸವಿದ್ದ ಹಂತಕ, ಪತ್ನಿ ಬೇರೊಬ್ಬರ ಜತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬುದನ್ನು ತಿಳಿದು, ಹೆಂಡತಿ ತಲೆಯನ್ನು ಕತ್ತರಿಸಿ ಮನೆಯಲ್ಲಿಯೇ ಇಟ್ಟುಕೊಂಡಿದ್ದ.
41 ವರ್ಷದ ಪತ್ನಿ ಪುಷ್ಪಲತಾಳನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ವಿಜಯ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆತ ಕೊಲೆಗೆ ಬಳಸಿದ್ದ ಆಯುಧವನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಯು ಪತ್ನಿಗೆ ಬೇರೊಬ್ಬರ ಜತೆ ಸಂಬಂಧವಿದೆ ಎಂದು ಶಂಕಿಸಿ ಪದೇ ಪದೇ ಕಿರುಕುಳ ನೀಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳವಾರ ಬೆಳಗ್ಗೆ ವಿಜಯ್ ಹಾಗೂ ಪುಷ್ಪಲತಾ ತನ್ನ ಸಹೋದರಿಯ ಹೊಸ ಮನೆಗೆ ಹೋಗಿದ್ದರು. ಅಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ.


