ಎಲ್ಲೆಡೆ ಇದೀಗ ʼದಿ ಕಾಶ್ಮೀರ್ ಫೈಲ್ಸ್ʼ ಸಿನಿಮಾದ ಸದ್ದು ತುಂಬಾ ಜೋರಾಗಿದೆ.ಪ್ರಧಾನಿ ಮೋದಿ ಕೂಡ ಇದೀಗ ಈ ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.ಇದರಿಂದ ಚಿತ್ರತಂಡಕ್ಕೆ ಒಂದು ಹೊಸ ಹುಮ್ಮಸ್ಸು ಸಿಕ್ಕಂತಾಗಿದೆ.
‘ದಿ ಕಾಶ್ಮೀರ್ ಫೈಲ್ಸ್’ ಸತ್ಯ ಘಟನೆ ಆಧರಿಸಿದ ಸಿನಿಮಾ ಆಗಿದೆ. ವಿವೇಕ್ ಅಗ್ನಿಹೋತ್ರಿ (Vivek Agnihotri) ನಿರ್ದೇಶನ ಮಾಡಿರುವ ಈ ಸಿನಿಮಾಕ್ಕೆ ದೇಶಾದ್ಯಂತ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಮಾರ್ಚ್ 11ರಂದು ಬಿಡುಗಡೆಯಾದ ಈ ಸಿನಿಮಾಕ್ಕೆ ಚಿತ್ರತಂಡ ಹೆಚ್ಚಿನ ಪ್ರಚಾರ ನೀಡಿರಲಿಲ್ಲ. ಆದ್ರೀಗ ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಿದೆ.
1990 ರ ಕಾಶ್ಮೀರದ ಘಟನೆಗಳು, ಕಾಶ್ಮೀರಿ ಪಂಡಿತರ ನರಮೇಧದ ಸುತ್ತ ಈ ಚಿತ್ರದ ಕಥೆ ಹೆಣೆಯಲಾಗಿದೆ. ಈ ಸಿನಿಮಾ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.ಕಾಶ್ಮೀರ ದಂಗೆಯ ಸಮಯದಲ್ಲಿ ಕಾಶ್ಮೀರಿ ಹಿಂದೂಗಳ ವಲಸೆ ಕುರಿತ ವಿಷಯ ಇಟ್ಟುಕೊಂಡು, ಅದನ್ನು ಒಂದು ಸಿನಿಮಾವಾಗಿ ಸಮರ್ಥವಾಗಿ ಕಟ್ಟಿಕೊಟ್ಟಿರುವ ಚಿತ್ರತಂಡಕ್ಕೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಿರ್ಮಾಪಕ ಅಭಿಷೇಕ್ ಜೊತೆಗೆ ಚಿತ್ರದ ನಟಿ ಪಲ್ಲವಿ ಜೋಷಿ ಅವರು ಪ್ರಧಾನಿ ಮೋದಿ (PM Modi) ಅವರನ್ನು ಭೇಟಿ ಮಾಡಿದ್ದಾರೆ. ಚಿತ್ರಕ್ಕೆ ಪ್ರಧಾನಿಯಿಂದ ಶಹಬ್ಬಾಸ್‌ಗಿರಿ ಸಿಕ್ಕಿರುವುದು ಚಿತ್ರ ತಂಡಕ್ಕೆ ಮತ್ತಷ್ಟು ಬಲ ತುಂಬಿದಂತೆ ಆಗಿದೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚಿತ್ರತಂಡದವರು ಪೋಸ್ಟ್ ಮಾಡಿಕೊಂಡಿದ್ದಾರೆ.
ಇದರಿಂದ ಚಿತ್ರಕ್ಕೆ ದೊಡ್ಡ ಮಟ್ಟದ ಉತ್ತೇಜನ ಸಿಕ್ಕಂತಾಗಿದೆ.ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ನಿರ್ಮಾಪಕ ಅಭಿಷೇಕ್ ಅಗರ್ವಾಲ್,ವಿವೇಕ್ ಅಗ್ನಿಹೋತ್ರಿ ಪತ್ನಿ ಪಲ್ಲವಿ ಜೋಶಿ ಅವರು ಮೋದಿ ಜೊತೆ ಕ್ಲಿಕ್ಕಿಸಿಕೊಂಡ ಈ ಫೋಟೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ದೇಶಾದ್ಯಂತ ಈ ಸಿನಿಮಾ ಮೊದಲ ದಿನ 630+ ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಕಂಡಿದೆ.ಬರೋಬ್ಬರಿ 3.55 ಕೋಟಿ ರೂ.ಮೊದಲ ದಿನ ಗಳಿಕೆ ಮಾಡಿದೆ.ಮೊದಲ ದಿನದ ಗಳಿಗೆಗಿಂತ ಎರಡನೇ ದಿನದ ಗಳಿಕೆ ಹೆಚ್ಚಿದೆ ಎನ್ನಲಾಗಿದೆ.
ಶನಿವಾರದ ಬಹುತೇಕ ಎಲ್ಲ ಶೋಗಳು ಹೌಸ್‌ಫುಲ್ ಪ್ರದರ್ಶನ ಕಂಡಿವೆ.ಇನ್ನು ಈ ಸಿನಿಮಾ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ ಅವರು ʼದಿ ಕಾಶ್ಮೀರ್ ಫೈಲ್ಸ್ʼ ನೋಡ್ತಾರಾ ಅನ್ನೋ ಪ್ರಶ್ನೆ ಕೂಡ ಈಗ ಹಲವರಲ್ಲಿ ಮೂಡಿದೆ. ಚಿತ್ರತಂಡ ಹೆಚ್ಚು ಪ್ರಚಾರ ಮಾಡದೇ ಹೋದ್ರೂ ಇದೀಗ ʼದಿ ಕಾಶ್ಮೀರಿ ಫೈಲ್ಸ್ʼ ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಸಿಗುವ ಮೂಲಕ ಯಶಸ್ಸು ಕಂಡಿದೆ. ನೈಜ ಘಟನೆಯಾಧರಿತ ಈ ಸಿನಿಮಾವನ್ನ ಪ್ರತಿಯೊಬ್ಬರೂ ನೋಡಿದ್ರೆ ಒಂದು ಉತ್ತಮವಾದ ಮೇಸೆಜ್ ತಗೊಂಡು ಹೊರಬರಹುದು.
ವರದಿ: ಆಂಟೋನಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB