ದೇಶದ ಅತಿ ಉದ್ದದ ಸಮುದ್ರ ಸೇತುವೆ ‘ಅಟಲ್ ಸೇತು’ ವನ್ನು ಪ್ರಧಾನಿ ದೇಶಕ್ಕೆ ಸಮರ್ಪಿಸಿದರು. 22 ಕಿ.ಮೀ. ಉದ್ದದ ಆರು ಪಥದ ಸೇತುವೆ ಇದಾಗಿದ್ದು, ನಿರ್ಮಾಣ ವೆಚ್ಚ 17,840 ಕೋಟಿ ರೂ. ಎನ್ನಲಾಗಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ರಾಜ್ಯಪಾಲ ರಮೇಶ್ ಬೈಸ್ ಅವರ ಉಪಸ್ಥಿತಿಯಲ್ಲಿ ಉದ್ಘಾಟನೆ ನಡೆಯಿತು. ಈ ಸೇತುವೆಯು ದಕ್ಷಿಣ ಮುಂಬೈಯನ್ನು ನವಿ ಮುಂಬೈಗೆ ಸಂಪರ್ಕಿಸುತ್ತದೆ. ಎರಡು ಗಂಟೆಗಳ ಪ್ರಯಾಣವನ್ನು ಕೇವಲ 15-20 ನಿಮಿಷಗಳಿಗೆ ಕಡಿಮೆ ಮಾಡಬಹುದು. ಸೇತುವೆಯು ಸಮುದ್ರ ಮಟ್ಟದಿಂದ 15 ಮೀಟರ್ ಎತ್ತರದಲ್ಲಿದೆ.
ಅಟಲ್ ಸೇತು, ಸೇತುವೆ ದೇಶದ ಎಂಜಿನಿಯರಿಂಗ್ ಶ್ರೇಷ್ಠತೆಗೆ ಉತ್ತಮ ಉದಾಹರಣೆಯಾಗಿದೆ. ಅಟಲ್ ಸೇತು ವಿಶ್ವದ 12 ನೇ ಅತಿ ಉದ್ದದ ಸೇತುವೆಯಾಗಿದೆ. ಇದು ಭಾರತದ ಅತಿ ಉದ್ದದ ಸೇತುವೆಯೂ ಹೌದು. ಅಟಲ್ ಸೇತು ಅಡಿಯಲ್ಲಿ ಹಡಗುಗಳು ಸಹ ಹಾದು ಹೋಗಬಹುದು. ವಾಹನಗಳು ಗಂಟೆಗೆ 100 ಕಿ.ಮೀ ವೇಗದಲ್ಲಿ ಹೋಗಬಹುದು. ಸೇತುವೆ ಮೇಲೆ ಬೈಕ್ ಮತ್ತು ಆಟೋರಿಕ್ಷಾಗಳಿಗೆ ಪ್ರವೇಶವಿಲ್ಲ.


