ಮಹಾನಗರ ಪಾಲಿಕೆ ಸದಸ್ಯ ಅಜಿತ್ ತಿವಳೇಕರ್ ಅವರ ಮೇಲೆ ನಡೆದಿರುವ ಹಲ್ಲೆಯನ್ನು ಖಂಡಿಸಿ ಗುರುವಾರ ಸಂಜೆ ತಳಕವಾಡಿ ಪೊಲೀಸ್ ಠಾಣಾ ಎದುರು ಭಾರತೀಯ ಜನತಾ ಪಕ್ಷದ ಮಹಾನಗರ ಪಾಲಿಕೆ ಸದಸ್ಯರಗಳು ಆರೋಪಿಗಳನ್ನು ಬಂಧಿಸಬೇಕು ಹಾಗೂ ಪ್ರಕರಣ ದಾಖಲು ಮಾಡಿಕೊಳ್ಳಬೇಕೆಂದು ಆಗ್ರಹಿಸಿ ಧರಣಿ ಸತ್ಯಾಗ್ರ ಮಾಡಿದರು.
ಪೊಲೀಸ್ ಠಾಣಾ ಎದುರುಗಡೆ ವಿರುದ್ಧ ಘೋಷಣೆ ಹಾಕಿದರು. ಪೊಲೀಸರು ಪ್ರಕರಣ ದಾಖಲೆ ಮಾಡಿಕೊಳ್ಳಲು ವಿಳಂಬ ನೀತಿ ಅನುಸರಿಸುತ್ತಿರುವ ಕಾರಣ ಏನಿದೆ ಎಂಬ ಪ್ರಶ್ನೆ ಮೇಲಿಂದ ಮೇಲೆ ಮಹಾನಗರ ಪಾಲಿಕೆ ಸದಸ್ಯರಗಳು ಪೊಲೀಸ್ ಅಧಿಕಾರಿಗಳನ್ನು ಕೇಳುತ್ತಿದ್ದರು. ಪೋಲೀಸ್ ಹಿರಿಯ ಅಧಿಕಾರಿಗಳು ಎಷ್ಟೇ ಸಂಜಾಯಿಸಿದರು ಕೂಡ ಪಾಲಿಕೆ ಸದಸ್ಯರು ಸ್ಥಳದಿಂದ ಹೋಗಲಿಲ್ಲ. ಕಡೆಗೆ ಪೊಲೀಸ್ ಅಧಿಕಾರಿಗಳು ಆರೋಪಿಗಳನ್ನು ಶೀಘ್ರವೇ ಬಂಧಿಸುತ್ತೇವೆ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಬಳಿಕ ಸದಸ್ಯರು ಧರಣಿ ಸತ್ಯಾಗ್ರಹವನ್ನು ಮುಗಿಸಿ ಆರೋಪಿಗಳ ಬಂಧನ ಆಗುವವರಿಗೆ ಪೊಲೀಸ್ ಠಾಣಾ ಎದುರುಗಡೆನೇ ನಿಲ್ಲುತ್ತೇವೆ ಎಂದು ನಿರ್ಣಯ ಕೈಗೊಂಡರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯರುಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.


