ಮುಂಬೈ: ರಾಮ ಧ್ವಜ ಕೊಂಡೊಯ್ಯುತ್ತಿದ್ದ ನಾಲ್ಕು ಜನರ ಮೇಲೆ ಗುಂಪೊಂದು ಅಚಾನಕ್ಕಾಗಿ ದಾಳಿ ಮಾಡಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಮತ್ತೊಂದು ಧರ್ಮದ ಹಲ್ಲೆಕೋರರು ಅಲ್ಲಾ ಹೋ ಅಕ್ಬರ್ ಎಂದು ಘೋಷಣೆ ಕೂಗುತ್ತಾ ವಾಹನಗಳನ್ನು ಜಖಂಗೊಳಿಸಿ, ಹಿಂದೂ ಸಮುದಾಯದವರ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ.
ಪೂರ್ವ ಸಿದ್ದತೆ ನಡೆಸಿದ್ದರು ಎನ್ನಲಾಗಿದೆ. ಆಕ್ರಮಣಕಾರಿಗಳು ವಾಹನಗಳನ್ನು ಪುಡಿಗಟ್ಟುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲಾರಂಭಿಸಿದೆ. ಹಲವರು ರಕ್ತಸಿಕ್ತರಾಗುವಂತೆ ಹಲ್ಲೆ ನಡೆಸಲಾಗಿದೆ. ವಾಹನಗಳ ಮೇಲೆ ಅಂಟಿಸಿದ್ದ ಹನುಮಂತನ ಸ್ಟಿಕರ್ ಗೆ ದುಷ್ಕರ್ಮಿಗಳು ಎಂಜಲು ಉಗಿದಿದ್ದಾರೆ.
ಮುಂಬೈ ಡಿಸಿಪಿ ಜಯಂತ್ ಬಾಜ್ಬಲೆ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಭಾನುವಾರ ರಾತ್ರಿ 11 ರ ಸುಮಾರಿ ಗೆ ಈ ಘಟನೆ ನಡೆದಿದೆ. ಜೈಶ್ರೀರಾಮ ಎಂದು ಘೋಷಣೆ ಕೂಗುತ್ತಿದ್ದ ನಾಲ್ವರನ್ನು ನಯಾನಗರದಲ್ಲಿ ಮುಸ್ಲಿಂ ಸಮುದಾಯದ ಗುಂಪು ಅಡ್ಡಗಟ್ಟಿ ಹಲ್ಲೆ ನಡೆಸಿದೆ. ಘಟನೆ ಕುರಿತಂತೆ ಇದುವರೆಗೂ ಐವರನ್ನು ಬಂಧಿಸಲಾಗಿದೆ ಎಂದಿದ್ದಾರೆ.


