ಬೆಂಗಳೂರು: ದುಷ್ಕರ್ಮಿಗಳು ಲಸ್ಸಿ ಕೆಫೆಗೆ ನುಗ್ಗಿ ಮ್ಯಾನೇಜರ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವಂತಹ ಘಟನೆ ನಗರದ ಕೆಂಗೇರಿಯ ಹೊಯ್ಸಳ ಸರ್ಕಲ್ ನಲ್ಲಿ ನಡೆದಿದೆ. ಹೊಯ್ಸಳ ಸರ್ಕಲ್ ಬಳಿ ಕೆಫೆ ಮ್ಯಾನೇಜರ್ ಆಗಿದ್ದ ಇರ್ಷಾದ್ ಮೇಲೆ ಹಲ್ಲೆ ಮಾಡಲಾಗಿದೆ.
ಬೈಕ್ ನಲ್ಲಿ ಬಂದ ಇಬ್ಬರು ದುರ್ಷರ್ಮಿಗಳಿಂದ ಕೃತ್ಯವೆಸಗಲಾಗಿದ್ದು, ಮೂರು ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ತೀವೃ ಗಾಯಗೊಂಡ ಇರ್ಷಾದ್ ಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಕೆಂಗೇರಿ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.


