ತುಮಕೂರು: ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸುವಂತಹ ಕಾಲಜ್ಞಾನ ಭವಿಷ್ಯವೊಂದು ಹೊರಬಿದ್ದಿದೆ. ಮುಂದಿನ ಪ್ರಧಾನಿಯಾಗುವ ಯೋಗ ಒಬ್ಬ ಮಹಿಳೆಗೆ ಇದೆ ಎಂದು ಕಾಲಜ್ಞಾನಿ ಡಾ. ಯಶ್ವಂತ ಗುರೂಜಿ ಭವಿಷ್ಯ ನುಡಿದಿದ್ದಾರೆ.
ತುಮಕೂರಿನ ನೊಣವಿನಕೆರೆಯಲ್ಲಿ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುತ್ತೆ ಅಂತ ಗುರೂಜಿ ಈ ಹಿಂದೆ ಭವಿಷ್ಯ ನುಡಿದಿದ್ದರು. ಆ ಭವಿಷ್ಯ ನಿಜ ಆಯ್ತು. ಇದೀಗ ರಾಷ್ಟ್ರ ರಾಜಕಾರಣದ ಭವಿಷ್ಯ ನುಡಿದಿದ್ದಾರೆ.
ಇಂದಿರಾಗಾಂಧಿ ನಂತರ ರಾಷ್ಟ್ರ ರಾಜಕಾರಣದ ಚುಕ್ಕಾಣಿಯನ್ನ ಮಹಿಳೆಯೇ ಹಿಡಿಯಲಿದ್ದಾರೆ. ಮಹಾಶಿವರಾತ್ರಿ ಹಬ್ಬದ ನಂತರ ಒಂದು ಶಕ್ತಿ ಅಂದರೆ, ಒಂದು ಸ್ತ್ರೀ ದೇಶವನ್ನ ಆಳ್ತಾರೆ. ಹಾಗಂತ ಕಾಲಜ್ಞಾನದ ಭವಿಷ್ಯವಾಣಿ ಭವಿಷ್ಯವನ್ನ ಹೇಳ್ತಿದೆ ಎಂದು ತಿಳಿಸಿದ್ದಾರೆ.
35 ವರ್ಷಗಳ ಹಿಂದಿನ ದಿನಮಾನಗಳಲ್ಲಿ ಒಂದು ಸ್ತ್ರೀ ದೇಶವನ್ನ ಆಳಿದ್ದಾರೆ. ಈಗ ಮಹಾಶಿವರಾತ್ರಿ ನಂತರ ರಾಷ್ಟ್ರ ರಾಜಕಾರಣದಲ್ಲಿ ದೊಡ್ಡ ಬದಲಾವಣೆ ಆಗಲಿದೆ. ಈ ದೇಶವನ್ನ ಒಂದು ಶಕ್ತಿ ಅಂದರೆ, ಒಂದು ಸ್ತ್ರೀ, ಮಹಾಶಿವರಾತ್ರಿ ನಂತರ ದೇಶ ಆಳ್ತಾರೆ ಎಂದು ಹೇಳಿದ್ದಾರೆ.
ಕಾಲಜ್ಞಾನ ಭವಿಷ್ಯದ ಪ್ರಕಾರ ಒಂದು ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಿಲ್ಲ. ಅತಂತ್ರ ಪರಿಸ್ಥಿತಿ ಆಗುತ್ತದೆ. ಮಿತ್ರ ಪಕ್ಷಗಳ ಸಹಾಯದಿಂದ ಒಂದು ಪಕ್ಷ ಅಧಿಕಾರಕ್ಕೆ ಬರುತ್ತೆ ಎಂದು ಹೇಳಿದ್ದಾರೆ. ಪ್ರಧಾನಿ ಯೋಗವಿರುವ ಸ್ತ್ರೀ ಯಾರೆಂದು ಮಕರ ಸಂಕ್ರಮಣದ ಹಬ್ಬದಂದು ಹೇಳಲಾಗುತ್ತದೆ ಎಂದು ಗುರೂಜಿ ಭವಿಷ್ಯ ನುಡಿದಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8123382149 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


