ಬಾಗಲಕೋಟೆ: ಅಣ್ಣನೊಬ್ಬ, ಮಲಗಿದ್ದ ತಮ್ಮನ ಮುಖಕ್ಕೆ ಕೊಡಲಿಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಮುಧೋಳ್ ನಗರದ ಗಾಂಧಿ ಚೌಕ್ ನಲ್ಲಿ ನಡೆದಿದೆ. ಸುನಿಲ್ ರಜಪೂತ(24) ಮೃತ ದುರ್ದೈವಿಯಾಗಿದ್ದಾರೆ. ಅಣ್ಣ ಸುಖೇನ್ ಸಿಂಗ್ ರಜಪೂತ್ ಆರೋಪಿಯಾಗಿದ್ದಾರೆ.
ಆರೋಪಿ ಅಣ್ಣ ಸುಖೇನ್ ಸಿಂಗ್ ರಜಪೂತ್ ತಮ್ಮ ಸುನಿಲ್ ರಾತ್ರಿ ನಿದ್ದೆಯಲ್ಲಿದ್ದಾಗ ಕೊಲೆ ಮಾಡಿದ್ದಾನೆ. ಬಳಿಕ ಅಲ್ಲಿಂದ ಸುಖೇನ್ ಸಿಂಗ್, ಸ್ಮಶಾನಕ್ಕೆ ಹೋಗಿ ಪಕ್ಕದಲ್ಲಿನ ಘಟಪ್ರಭಾ ನದಿಯಲ್ಲಿ ಸ್ನಾನ ಮಾಡಿದ್ದಾನೆ. ಅಷ್ಟು ಮಾತ್ರ ವಲ್ಲದೆ ಹಣೆಗೆ ಭಸ್ಮ ಹಾಕಿಕೊಂಡು ಚೇಷ್ಟೆ ಮಾಡಿದ್ದಾನೆ. ಅಷ್ಟೇ ಅಲ್ಲ, ಅಲ್ಲಿನ ಕೆಲಸಗಾರರಿಗೆ ನನ್ನ ತಮ್ಮನ ಮೃತದೇಹ ಬರುತ್ತದೆ ಎಂದು ಹೇಳಿದ್ದಾನೆ.
ಸುಖೇನ್ ಸಿಂಗ್ ರಜಪೂತ್ ಹಾಗೂ ಸುನಿಲ್ ಇಬ್ಬರು ಅಣ್ಣ-ತಮ್ಮಂದಿರು, ಸುಖೇನ್ ಕಳೆದ ಐದಾರು ವರ್ಷದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ. ಮನೆಯಲ್ಲಿ ಕೆಲಸ ಮಾಡದೆ ಹುಚ್ಚುನಂತೆ ವರ್ತನೆ ತೋರುತ್ತಿದ್ದ. ತಂದೆ-ತಾಯಿ ಆತನಿಗೆ ಬೈದು ಬುದ್ದಿ ಹೇಳುತ್ತಿದ್ದರು.
ಇನ್ನು ತಂದೆ-ತಾಯಿ, ಅಜ್ಜಿ ಎಲ್ಲರೂ ತೊಟ್ಟಿಲು ಕಾರ್ಯಕ್ಕೆ ಎಂದು ಎಪ್ರಿಲ್ 15 ರಂದು ರಾಯಚೂರಿಗೆ ಹೋಗಿದ್ದು, ಅದೇ ದಿನ ರಾತ್ರಿ 11.20 ರ ಸುಮಾರಿಗೆ ಸುಖೇನ್ ಈ ಕೃತ್ಯವೆಸಗಿದ್ದಾನೆ. ಸ್ಥಳಕ್ಕೆ ಮುಧೋಳ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸುಖೇನ್ ಸಿಂಗ್ ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


