ನೂರರ ಗಡಿ ತಲುಪಿದ್ದ ಈರುಳ್ಳಿ ದರ ಭಾರಿ ಇಳಿಕೆ ಕಂಡಿದೆ. ತಿಂಗಳ ಹಿಂದೆ 80 ರೂ. ವರೆಗೆ ಇದ್ದ ಈರುಳ್ಳಿ ಬೆಲೆ ಈಗ 35 ರೂ.ಗೆ ಇಳಿಕೆಯಾಗಿದ್ದು, ಗ್ರಾಹಕರು ನಿಟ್ಟಿಸಿರುಬಿಟ್ಟಿದ್ದಾರೆ. ಆದರೆ, ಬೆಲೆ ಇಳಿಕೆಯಾಗಿರುವುದು ರೈತರಿಗೆ ಆತಂಕ ತಂದಿದೆ.
ಈರುಳ್ಳಿಗೆ ಸರ್ಕಾರ ರಫ್ತು ನಿರ್ಬಂಧ ಹೇರಿದೆ. ಇದರ ನಡುವೆಯೇ ಮಾರುಕಟ್ಟೆಗೆ ಉತ್ತರ ಕರ್ನಾಟಕದ ಜಿಲ್ಲೆಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬರುತ್ತಿರುವ ಕಾರಣ ಬೆಲೆ ಕುಸಿತ ಆಗಿದೆ. ಶೀಘ್ರದಲ್ಲೇ ಹಿಂಗಾರು ಹಂಗಾಮಿನ ಬೆಳೆ ಕೂಡ ಮಾರುಕಟ್ಟೆಗೆ ಬರಲಿದೆ. ಹೀಗಾಗಿ, ಮತ್ತೆ ಬೆಲೆ ಏರಿಕೆಯಾಗುವ ಸಾಧ್ಯತೆ ತೀರಾ ಕಡಿಮೆ.


