nammatumakuru

    Subscribe to Updates

    Get the latest creative news from FooBar about art, design and business.

    What's Hot

    ಒಳಮೀಸಲಾತಿ ಜಾರಿಗೆ ಆಗ್ರಹ: ತುರುವೇಕೆರೆಯಲ್ಲಿ ಮಾದಿಗ ಸಮುದಾಯದಿಂದ ಬೃಹತ್ ಪ್ರತಿಭಟನೆ

    March 11, 2026

    ಶಿರಾ: ಹುಣಸೆಕಟ್ಟೆ ಗ್ರಾಮದಲ್ಲಿ ಚಿರತೆ ಮತ್ತು ಮರಿಗಳ ಪ್ರತ್ಯಕ್ಷ; ಕುರಿಗಳ ಮೇಲೆ ದಾಳಿ

    March 11, 2026

    ವಿಕಲಚೇತನ ಮಕ್ಕಳನ್ನು ಕೂಡಿ ಹಾಕಿದರೆ ಕಠಿಣ ಶಿಕ್ಷೆ: ನ್ಯಾಯಾಧೀಶೆ ನೂರುನ್ನೀಸಾ ಎಚ್ಚರಿಕೆ

    March 11, 2026
    Facebook Twitter Instagram
    ಟ್ರೆಂಡಿಂಗ್
    • ಒಳಮೀಸಲಾತಿ ಜಾರಿಗೆ ಆಗ್ರಹ: ತುರುವೇಕೆರೆಯಲ್ಲಿ ಮಾದಿಗ ಸಮುದಾಯದಿಂದ ಬೃಹತ್ ಪ್ರತಿಭಟನೆ
    • ಶಿರಾ: ಹುಣಸೆಕಟ್ಟೆ ಗ್ರಾಮದಲ್ಲಿ ಚಿರತೆ ಮತ್ತು ಮರಿಗಳ ಪ್ರತ್ಯಕ್ಷ; ಕುರಿಗಳ ಮೇಲೆ ದಾಳಿ
    • ವಿಕಲಚೇತನ ಮಕ್ಕಳನ್ನು ಕೂಡಿ ಹಾಕಿದರೆ ಕಠಿಣ ಶಿಕ್ಷೆ: ನ್ಯಾಯಾಧೀಶೆ ನೂರುನ್ನೀಸಾ ಎಚ್ಚರಿಕೆ
    • ಕುಣಿಗಲ್: ಒಂಟಿ ವೃದ್ಧೆಯ ಉಸಿರುಗಟ್ಟಿಸಿ ಕೊಲೆ ಮಾಡಿ ಚಿನ್ನಾಭರಣ ದೋಚಿದ ದುಷ್ಕರ್ಮಿಗಳು
    • ಕೊಡಚಾದ್ರಿ ಚೀಟ್ಸ್ ಪ್ರೈವೇಟ್ ಲಿಮಿಟೆಡ್‌ : ಸಾಲ ಪಡೆದ ವ್ಯಕ್ತಿಗೆ ಅವಮಾನ
    • ಅರ್ಹತೆ ಮಾನದಂಡಗಳಡಿ ಸಾಲ–ಸೌಲಭ್ಯ ವಿತರಿಸಿ: ಬ್ಯಾಂಕರ್ಸ್ ಕಾರ್ಯಾಗಾರದಲ್ಲಿ ಡಿಸಿ ನಾಗೇಂದ್ರ ಪ್ರಸಾದ್ ಕೆ.
    • ಮಾ.18 ರಿಂದ ಏ.2ರವರಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ:  ವ್ಯವಸ್ಥಿತ, ಸುಸೂತ್ರ, ಪಾರದರ್ಶಕ  ಪರೀಕ್ಷೆಗೆ ಜಿಲ್ಲಾಧಿಕಾರಿ ಡಾ.‌ಆನಂದ‌ ಕೆ. ಸೂಚನೆ
    • ಸಾಮಾಜಿಕ ಜಾಲತಾಣಗಳಿಂದ ನಿಜವಾದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರತಿಯೊಬ್ಬ ನಾಗರಿಕನಿಗೂ ಲಭಿಸಿದೆ: ಡಾ.ಎ.ಎಸ್. ಬಾಲಸುಬ್ರಮಣ್ಯ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಮೋದಿ ಬರೀ ಮಾತಲ್ಲಿ ಮನೆ ಕಟ್ಟಿದ್ದು ಸಾಕು ಎಂದು ದೇಶದ ಜನ ತೀರ್ಮಾನಿಸಿದ್ದಾರೆ: ಸಿಎಂ ಸಿದ್ದರಾಮಯ್ಯ
    ರಾಜ್ಯ ಸುದ್ದಿ April 2, 2024

    ಮೋದಿ ಬರೀ ಮಾತಲ್ಲಿ ಮನೆ ಕಟ್ಟಿದ್ದು ಸಾಕು ಎಂದು ದೇಶದ ಜನ ತೀರ್ಮಾನಿಸಿದ್ದಾರೆ: ಸಿಎಂ ಸಿದ್ದರಾಮಯ್ಯ

    By adminApril 2, 2024No Comments2 Mins Read
    t naraseepur 2

    ತಿ. ನರಸೀಪುರ: ದೇಶದ ಜನ ಈ ಬಾರಿ ನರೇಂದ್ರ ಮೋದಿಯವರ ಮಾತು ಮತ್ತು ಕೆಲಸ ಎರಡನ್ನೂ ತುಲನೆ ಮಾಡಿ ಮತ ಹಾಕ್ತಾರೆ. ಹೀಗಾಗಿ ಅವರಿಗೆ 200 ಸೀಟು ದಾಟುವುದೇ ಕಷ್ಟ ಎನ್ನುವ ವಾಸ್ತವದ ಮನವರಿಕೆಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.

    ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿನ ನರಸೀಪುರ ವಿಧಾನಸಭಾ ಕ್ಷೇತ್ರದ, ತಿ. ನರಸೀಪುರದಲ್ಲಿ ನಡೆದ ಸುನಿಲ್ ಬೋಸ್ ಪರ ಸಾರ್ವಜನಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.


    Provided by
    Provided by

    t naraseepur 3

    ನರೇಂದ್ರ ಮೋದಿಯವರು‌ ಪ್ರಧಾನಿಯಾಗಿ 10 ವರ್ಷ ಆಯ್ತು. ಅವರು ಕೊಟ್ಟ ಭರವಸೆಯಲ್ಲಿ ಒಂದೇ ಒಂದನ್ನಾದ್ರೂ ಈಡೇರಿಸಿದ್ದಾರಾ ಹೇಳಿ. ಹೀಗಾಗಿ ದೇಶದ ಜನ ಈ ಬಾರಿ ನರೇಂದ್ರ ಮೋದಿಯವರ ಮಾತು ಮತ್ತು ಕೆಲಸ ಎರಡನ್ನೂ ತುಲನೆ ಮಾಡಿ ಮತ ಹಾಕ್ತಾರೆ. ಮೋದಿ ಬರೀ ಮಾತಲ್ಲಿ ಮನೆ ಕಟ್ಟಿದ್ದು ಸಾಕು ಎಂದು ದೇಶದ ಜನ ತೀರ್ಮಾನಿಸಿದ್ದಾರೆ ಎಂದರು.

    ದೇಶದಲ್ಲಿರುವ ಕಪ್ಪು ಹಣವನ್ನೆಲ್ಲಾ ಕರಗಿಸ್ತೀನಿ ಎಂದು ಹೇಳಿ ಡಿಮಾನೆಟೈಸೇಷನ್ ಮಾಡಿದರು. ಆದರೆ, ಇದರಿಂದ ಕಪ್ಪು ಹಣ ಕರಗಲಿಲ್ಲ. ಇದರಿಂದ ಲಾಭ ಆಗಿದ್ದು ಅಂಬಾನಿ-ಅದಾನಿಗೆ ಮಾತ್ರ. ನೋಟು ನಿಷೇಧಕ್ಕೂ ಮೊದಲು ಇವರ ಬಳಿ ಇದ್ದ ಆಸ್ತಿ, ನೋಟು ನಿಷೇಧದ ಬಳಿಕ ಅವರ ಆಸ್ತಿಯಲ್ಲಿ ಆದ ಏರಿಕೆಯನ್ನು ನೀವೇ ತುಲನೆ ಮಾಡಿ ಸರಿಯಾಗಿ ಅರ್ಥ ಮಾಡಿಕೊಳ್ಳಿ ಎಂದು ಕರೆ ನೀಡಿದರು.

    ವಿದೇಶದಲ್ಲಿರುವ ಕಪ್ಪುಹಣ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಾಕ್ತೀವಿ ಅಂದ್ರು, ಹಾಕಿದ್ರಾ ? ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀನಿ ಅಂದ್ರು, ಇವರ ಮಾತನ್ನು ನಂಬಿದ ದೇಶದ ಯುವಕ ಯುವತಿಯರು ಎಲ್ಲಿ ಉದ್ಯೋಗ ಎಂದರೆ ಪಕೋಡಾ ಮಾರಾಟ ಮಾಡಿ ಎಂದರು.

    ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಅಂದ್ರು. ಆಯ್ತಾ ಯಾರದ್ದಾದರೂ ವಿಕಾಸ? ಅಚ್ಛೆ ದಿನ್ ಆಯೆಗಾ ಅಂದರು, ನಿಮ್ಮಲ್ಲಿ ಯಾರ ಬದುಕಲ್ಲಾದರೂ ಅಚ್ಚೆ ದಿನ್ ಬಂತಾ ಎಂದು ಪ್ರಶ್ನಿಸಿದರು.

    ಭಾರತೀಯರನ್ನು ಕೇವಲ ಭಾವನಾತ್ಮಕವಾಗಿ ಕೆರಳಿಸಿ ಅವರ ಬದುಕನ್ನು ಹಾಳು ಮಾಡಿದ ಸುಳ್ಳುಕೋರರಿಗೆ ದೇಶದ ಪ್ರಜ್ಞಾವಂತ ಸಮುದಾಯ ತಕ್ಕ ಪಾಠ ಕಲಿಸಲಿದೆ ಎಂದರು.

    ಕ್ಷೇತ್ರದ ಶಾಸಕರೂ ಸಮಾಜ ಕಲ್ಯಾಣ ಸಚಿವರೂ ಆದ ಹೆಚ್.ಸಿ‌. ಮಹದೇವಪ್ಪ, ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ್, ಶಾಸಕರಾದ ಅನಿಲ್ ಚಿಕ್ಕಮಾದು, ದರ್ಶನ್ ದ್ರುವನಾರಾಯಣ್ ಸೇರಿ ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಯ ಶಾಸಕರುಗಳು ಉಪಸ್ಥಿತರಿದ್ದರು.

    ಆಶ್ರಯ ಸಮಿತಿ ಅಧ್ಯಕ್ಷರಾದ ಯತೀಂದ್ರ ಸಿದ್ದರಾಮಯ್ಯ, ಚಾಮರಾಜನಗರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸುನಿಲ್ ಬೋಸ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾದ ಪುಷ್ಪ ಅಮರನಾಥ್ ಸೇರಿ ವರುಣಾ ವಿಧಾನಸಭಾ ಕ್ಷೇತ್ರದ ಮುಖಂಡರು, ಬ್ಲಾಕ್ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಮತ್ತು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಸ್ಥಳೀಯ ನಾಯಕರುಗಳು ಸಭೆಯಲ್ಲಿ ಉಪಸ್ಥಿತರಿದ್ದು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ಶಪಥ ಮಾಡಿದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

     

    admin
    • Website

    Related Posts

    ಸಮಾನತೆ ತರಲು ಬಾಬಾ ಸಾಹೇಬರು ಇಡೀ ಜೀವನವನ್ನೇ ಮುಡಿಪಾಗಿಟ್ಟರು: ಪಲ್ಲವಿ ಜಿ.

    March 11, 2026

    ದೇಶದಲ್ಲಿ ಎಲ್‌ ಪಿಜಿ ಸಿಲಿಂಡರ್ ಕೊರತೆ: ತುಟಿಬಿಚ್ಚದ ಬಿಜೆಪಿ ಸಂಸದರು: ಡಿ.ಕೆ.ಶಿವಕುಮಾರ್ ವಾಗ್ದಾಳಿ

    March 10, 2026

    ರಾಜ್ಯದ 183 ಗ್ರಾಮಗಳಲ್ಲಿ ಕುಡಿಯುವ ನೀರಿನ ತೀವ್ರ ಅಭಾವ: ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ

    March 10, 2026

    Comments are closed.

    Our Picks

    LPG ಸಿಲಿಂಡರ್ ಬುಕ್ಕಿಂಗ್ ನಿಯಮದಲ್ಲಿ ಮಹತ್ವದ ಬದಲಾವಣೆ: ಇನ್ಮುಂದೆ 25 ದಿನಗಳ ಅಂತರ ಕಡ್ಡಾಯ!

    March 10, 2026

    ಇಸ್ರೇಲ್–ಇರಾನ್ ಸಂಘರ್ಷ: ದುಬೈನಲ್ಲಿರುವ ಕನ್ನಡಿಗರ ನೆರವಿಗೆ ಸಹಾಯವಾಣಿ ಆರಂಭ

    March 3, 2026

    ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026: ಆಲೋಚನೆ ಮತ್ತು ನಾವೀನ್ಯತೆಗಳ ಪ್ರಬಲ ಸಂಗಮ ಎಂದ ಪ್ರಧಾನಿ ಮೋದಿ

    February 17, 2026

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುರುವೇಕೆರೆ

    ಒಳಮೀಸಲಾತಿ ಜಾರಿಗೆ ಆಗ್ರಹ: ತುರುವೇಕೆರೆಯಲ್ಲಿ ಮಾದಿಗ ಸಮುದಾಯದಿಂದ ಬೃಹತ್ ಪ್ರತಿಭಟನೆ

    March 11, 2026

    ತುರುವೇಕೆರೆ: ಒಳಮೀಸಲಾತಿಯನ್ನು ಜಾರಿಗೆ ತರದೆ ರಾಜ್ಯ ಸರ್ಕಾರವು ಏಕಾಏಕಿ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಮುಂದಾಗಿರುವುದನ್ನು ಖಂಡಿಸಿ, ಮಾದಿಗ ಸಮುದಾಯದ ಮುಖಂಡರು…

    ಶಿರಾ: ಹುಣಸೆಕಟ್ಟೆ ಗ್ರಾಮದಲ್ಲಿ ಚಿರತೆ ಮತ್ತು ಮರಿಗಳ ಪ್ರತ್ಯಕ್ಷ; ಕುರಿಗಳ ಮೇಲೆ ದಾಳಿ

    March 11, 2026

    ವಿಕಲಚೇತನ ಮಕ್ಕಳನ್ನು ಕೂಡಿ ಹಾಕಿದರೆ ಕಠಿಣ ಶಿಕ್ಷೆ: ನ್ಯಾಯಾಧೀಶೆ ನೂರುನ್ನೀಸಾ ಎಚ್ಚರಿಕೆ

    March 11, 2026

    ಕುಣಿಗಲ್: ಒಂಟಿ ವೃದ್ಧೆಯ ಉಸಿರುಗಟ್ಟಿಸಿ ಕೊಲೆ ಮಾಡಿ ಚಿನ್ನಾಭರಣ ದೋಚಿದ ದುಷ್ಕರ್ಮಿಗಳು

    March 11, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.