ಮನೆಯಿಂದ ಹೊರ ಹೋದ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದು, ಕೊಲೆಯ ಶಂಕೆ ವ್ಯಕ್ತವಾಗಿರುವ ಘಟನೆ ಬೆಳಗಾವಿ ತಾಲೂಕಿನ ಬಿ ಕೆ ಕಂಗ್ರಾಳಿ ಗ್ರಾಮದಲ್ಲಿ ನಡೆದಿದೆ.
ಸುಭಾಷ್ ಕಲ್ಲಪ್ಪ ಕುರುಡೆ (56) ಮೃತಪಟ್ಟ ದುರ್ದೈವಿಯಾಗಿದ್ದು ಅನೈತಿಕ ಸಂಬಂಧ ಕೊಲೆಗೆ ಕಾರಣವಾಗಿದೆ ಎಂಬ ಶಂಕೆ ವ್ಯಲ್ತವಾಗಿದೆ. ಪತ್ನಿಯು ಪರಪುರುಷನೊಂದಿಗೆ ಅನೈತಿಕ ಸಂಬಂಧ ಕುರಿತು ಪ್ರಶ್ನಿಸಿದಾಗ ಪತಿಗೆ ಪತ್ನಿಯಿಂದ ಪ್ರತಿ ಬಾರಿ ಹಲ್ಲೆಗೊಳಾಗುತ್ತಿದ್ದ ಹಾಗೂ ಸುಮಾರು ವರ್ಷಗಳಿಂದ ಈ ಘಟನೆ ನಡೆಯುತ್ತ ಬಂದಿದ್ದು ಮಂಗಳವಾರ ಈ ಜಗಳ ಪಂಚಾಯತಿ ಕಟ್ಟಿಗೆ ಹತ್ತಿದೆ.
ಸುಭಾಷ್ ಉರುಡೆ ಅವರು ಪಂಚಾಯತಿ ಸದಸ್ಯರುಗಳಿಗೆ ತಮ್ಮ ಪತ್ನಿಯ ವಿರುದ್ಧ ದೂರ ನೀಡಲು ಹೋದಾಗ ಪತ್ನಿ ಪಂಚಾಯಿತಿಗೆ ಬಂದು ಪತಿಯನ್ನು ಥಳಸಿ ಕರೆದುಕೊಂಡು ಹೋಗಿದ್ದಾಳೆ ಎಂದು ಸ್ಥಳೀಯ ಪ್ರತ್ಯಕ್ಷಿದರ್ಶಿಗಳ ಹೇಳಿಕೆಯಾಗಿದೆ. ಮಂಗಳವಾರ ರಾತ್ರಿಯಿಂದ ಮನೆಯಿಂದ ಹೊರಗೆ ಹೋಗಿರುವ ಸುಭಾಷ್ ಉರುಡೆ ಅವರು ಬುಧವಾರ ಸಾಯಂಕಾಲ ಶವ ಆಗಿ ಪತ್ತೆ ಆಗಿರುವುದು ಬೆಳಕಿಗೆ ಬಂದಿದೆ. ಈ ಪ್ರಕರಣ ಎಪಿಎಂಸಿ ಪೊಲೀಸ್ ಠಾಣಾದಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ತನಿಖೆ ನಡೆಯುತ್ತಿದೆ.


