ಡಾ. ಶಿವಮೂರ್ತಿ ಮುರುಘಾ ಶರಣರ ಕೈಗೆ ಮತ್ತೆ ಮುರುಘಾಮಠದ ಅಧಿಕಾರ ದೊರೆತಿದೆ. 2022ರ ಸೆ.1ರಂದು ಪೋಕ್ಸೋ ಕೇಸ್ ನಲ್ಲಿ ಮುರುಘಾ ಶ್ರೀ ಬಂಧನವಾದ ಬಳಿಕ ರಾಜ್ಯ ಸರ್ಕಾರವೇ ಮಠಕ್ಕೆ ಆಡಳಿತಾಧಿಕಾರಿಯನ್ನ ನೇಮಿಸಿತ್ತು.
ನವೆಂಬರ್ 16ರಂದು ಜಾಮೀನಿನ ಮೇಲೆ ಮುರುಘಾಶ್ರೀ ಬಿಡುಗಡೆಯಾದ ಹಿನ್ನಲೆ ಮಠದ ಅಧಿಕಾರ ಹಿಂದಿರುಗಿಸುವಂತೆ ಮುರುಘಾಶ್ರೀ ಕೋರ್ಟ್ ಮೊರೆ ಹೋಗಿದ್ದರು.
ಅದರಂತೆ ಚಿತ್ರದುರ್ಗ ಪಿಡಿಜೆಯಿಂದ ಮುರುಘಾಶ್ರೀಗೆ ಅಧಿಕಾರ ಹಸ್ತಾಂತರಿಸಿ ಎಂದು ಹೈಕೋರ್ಟ್ ಆದೇಶಿಸಿದೆ.


