ಮೀರತ್ ನ ಸರ್ದಾರ್ ವಲ್ಲಭಾಯಿ ಪಟೇಲ್ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆದ ಮೂರು ದಿನದ ರೈತರ ಮೇಳ ಹಾಗೂ ಕೃಷಿ ಮೇಳದಲ್ಲಿ ಭಾಗವಹಿಸಿದ್ದ ಅನ್ಮೋಲ್ ಎಂಬ ಕೋಣದ ಬೆಲೆ 2 ರೋಲ್ಸ್ ರಾಯ್ಸ್ ಹಾಗೂ 10 ಮರ್ಸಿಡಿಸ್ ಬೆಂಜ್ ಕಾರುಗಳು ಸೇರಿದರೆ ಎಷ್ಟು ಬೆಲೆಯಾಗುತ್ತದೆಯೋ ಅಷ್ಟಂತೆ.
ಹರಿಯಾಣದ ಸಿರ್ಸಾದಿಂದ ಬಂದಿದ್ದ ಈ ಕೋಣದ ಮಾಲೀಕ ಜಗತ್ ಸಿಂಗ್. ಇವರು ಹರ್ಯಾಣ ಮೂಲದವರಂತೆ. ಈ ಕೋಣವನ್ನು ಆರೋಗ್ಯಕರವಾಗಿ ನೋಡಿಕೊಳ್ಳಲು ಕೋಣಕ್ಕೆ 5 ಲೀಟರ್ ಹಾಲು, 4 ಕೆಜಿ ದಾಳಿಂಬೆ, 30 ಬಾಳೆಹಣ್ಣು, 20 ರಿಚ್ ಪ್ರೊಟೀನ್ ಇರುವ ಮೊಟ್ಟೆ ಹಾಗೂ ಮೇವು ಕೊಡುತ್ತಿದ್ದಾರಂತೆ. ಇಷ್ಟೇ ಅಲ್ಲದೇ ಕಾಲ್ ಕೆಜಿ ಬಾದಾಮಿ ಗುಲ್ಕಂದ್ ಕೂಡ ನೀಡುತ್ತಿದ್ದಾರೆ.
ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿಯಾಗಿದೆ. ಇದು ಯಾವುದೇ ಕೃಷಿ ಮೇಳಕ್ಕೆ ಹೋದರೂ ಅಲ್ಲಿ ಕೋಣವನ್ನು ನೋಡಲು ಜನರು ಮುಗಿಬೀಳುತ್ತಾರೆ. ಅಷ್ಟೊಂದು ಆಕರ್ಷಣಿಯವಾಗಿದೆ ಈ ಅನ್ಮೋಲ್ ಕೋಣ.
ಇನ್ನೂ ಕೋಣದ ಮಾಲೀಕ ಜಗತ್ ಸಿಂಗ್ ಈ ಕೋಣದಿಂದ ಈಗಾಗಲೇ ಭರ್ಜರಿ ಆದಾಯವನ್ನು ಕೂಡ ಗಳಿಸುತ್ತಿದ್ದಾರೆ. ಈ ಕೋಣದ ವೀರ್ಯವನ್ನು ಮಾರಾಟ ಮಾಡಲಾಗುತ್ತಿದೆ. ತಿಂಗಳಿಗೆ 4ರಿಂದ 5 ಲಕ್ಷ ರೂಪಾಯಿ ಆದಾಯವನ್ನು ಗಳಿಸುತ್ತಿದ್ದಾರೆ. ಕೋಣಕ್ಕೆ ತಿಂಗಳಲ್ಲಿ 60 ಸಾವಿರ ರೂಪಾಯಿ ಖರ್ಚು ಮಾಡಲಾಗುತ್ತಿದೆಯಂತೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q