ಹಂಚಿಮಾರನಹಳ್ಳಿ ಗ್ರಾಮಸ್ಥರು ಶಾಶ್ವತ ಕುಡಿಯುವ ನೀರಿಗಾಗಿ ಕೊರಟಗೆರೆ ಇ ಓ ಕಚೇರಿ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಬಗ್ಗೆ ನಮ್ಮತುಮಕೂರು ವಾಹಿನಿ ವರದಿ ಪ್ರಕಟಿಸಿತ್ತು. ಈ ವರದಿ ಪ್ರಕಟಗೊಂಡು 12 ಗಂಟೆಗಳೊಳಗೆ ಬೋರ್ ವೆಲ್ ಕೊರೆಸಿ ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆ ಮಾಡಲಾಗಿದೆ.
ತಾಲ್ಲೂಕು ಪಂಚಾಯಿತಿ ಇ ಓ ಅಪೂರ್ವ ಸಿ. ಅವರು, ನಮ್ಮ ತುಮಕೂರು ವಾಹಿನಿಯ ವರದಿಗೆ ಸ್ಪಂದಿಸಿ ಹಂಚಿಮಾರನಹಳ್ಳಿ ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆ ಮಾಡಿದ್ದಾರೆ. ಶಾಶ್ವತ ಕುಡಿಯುವ ನೀರಿಗಾಗಿ ಸುಮಾರು 8 ವರ್ಷದಿಂದ ಹಂಚಿಮಾರನಹಳ್ಳಿ ಗ್ರಾಮಸ್ಥರು ಅಲೆದಾಡುತ್ತಿದ್ದರು. ಇದೀಗ ನಮ್ಮತುಮಕೂರು ವರದಿಯ ಬೆನ್ನಲ್ಲೇ ಗ್ರಾಮಸ್ಥರ ಸಮಸ್ಯೆ ಬಗೆಹರಿದಿದೆ.
ಭಾನುವಾರ ನಮ್ಮ ತುಮಕೂರು ವಾಹಿನಿಯು ಹಂಚಿಮಾರನಹಳ್ಳಿ ಗ್ರಾಮಸ್ಥರು ಶಾಶ್ವತ ಕುಡಿಯುವ ನೀರಿಗಾಗಿ ಕೊರಟಗೆರೆ ಇ ಓ ಕಚೇರಿ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದ ವರದಿ ಪ್ರಸಾರ ಮಾಡಿತ್ತು..
ಸುದ್ದಿ ಪ್ರಸಾರವಾದ ಬಳಿಕ ಕೇವಲ 12 ಗಂಟೆ ಒಳಗೆಯೇ ಪರಿಹಾರ ಸಿಕ್ಕಂತಾಗಿದೆ. ಇದು ನಮ್ಮ ತುಮಕೂರು ವಾಹಿನಿಯ ಬಿಗ್ ಇಂಫ್ಯಾಕ್ಟ್ ಆಗಿದೆ.
ಹಂಚಿಮಾರನಹಳ್ಳಿ ಗ್ರಾಮಕ್ಕೆ ಬಂದ ಬೋರ್ವೆಲ್ ವಾಹನ ಕಂಡ ಖಾಸಗಿ ಜಮೀನಿನ ರೈತ ಡ್ರಿಲ್ ಮಾಡದಂತೆ ತಡೆದ ಪ್ರಸಂಗವೂ ಸಹ ನಡೆದಿದೆ. ಈ ಸಂದರ್ಭದಲ್ಲಿ ಕೊರಟಗೆರೆ ಪಿಎಸ್ ಐ ಚೇತನ್ ಕುಮಾರ್ ಮತ್ತು ಪೊಲೀಸ್ ಸಿಬ್ಬಂದಿಗಳು ಮಧ್ಯಪ್ರವೇಶಿಸಿ ಖಾಸಗಿ ಜಮೀನಿನ ರೈತ ಕುಟುಂಬಕ್ಕೆ ಕಾನೂನು ಅರಿವು ಮೂಡಿಸಿ ಬೋರ್ವೆಲ್ ಡ್ರಿಲ್ ಮಾಡಲು ಮನ ಹೋಲಿಸಿದ್ದರು.
ತಾಲೂಕು ಪಂಚಾಯಿತಿ ಇ ಓ ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಸೂಚಿಸಿದ್ದ ಸ್ಥಳದಲ್ಲಿಯೇ ಸುಮಾರು 560 ಅಡಿಯಲ್ಲಿ 3 ಇಂಚು ನೀರು ಸಿಕ್ಕಿದ್ದು ಈ ಗ್ರಾಮಕ್ಕೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿದಂತಾಗಿದೆ..
ಬೋರ್ ವೆಲ್ ಕೊರೆಯುತ್ತಿದ್ದ ವೇಳೆ ಚಿಮ್ಮಿದ ನೀರನ್ನು ಕಂಡು ಗ್ರಾಮಸ್ಥರು ಕುಣಿದು ಕುಪ್ಪಳಿಸಿ, ಸಂಭ್ರಮಿಸಿದ್ದರು, ಗ್ರಾಮದ ಮಹಿಳೆಯರು ಗಂಗೆ ಪೂಜೆ ಮಾಡಿ ಸಂತಸ ವ್ಯಕ್ತಪಡಿಸಿದರು. ನಮ್ಮ ತುಮಕೂರು ವಾಹಿನಿ ಪ್ರತಿನಿಧಿ ಮಂಜುಸ್ವಾಮಿ ಎಂ.ಎನ್. ರವರ ವಿಶೇಷ ಕಾಳಜಿಗೆ ಗ್ರಾಮಸ್ಥರು ಕೃತಜ್ಞತೆ ಸಲ್ಲಿಸಿದರು.
ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ಕೀರ್ತಿ ನಾಯಕ್ ಹಾಗೂ ಕೊರಟಗೆರೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಚೇತನ್ ಕುಮಾರ್ ಮತ್ತು ಬೂದಗವಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಘು ನಂದನ್ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಶ್ರೀನಿವಾಸ್ ಮತ್ತು ಗ್ರಾಮ ಪಂಚಾಯಿತಿ ಸದಸ್ಯರ ಮುಂದಾಳತ್ವದಲ್ಲಿ ಬೋರ್ವೆಲ್ ಕೊರೆಯಲಾಯ್ತು.
ಹಂಚಿಮರನಹಳ್ಳಿಯ ಗ್ರಾಮಸ್ಥರ ನೋವಿಗೆ ತಕ್ಷಣವೇ ಸ್ಪಂದಿಸಿದ ಕ್ಷೇತ್ರದ ಜನಪ್ರಿಯ ಶಾಸಕ ಹಾಗೂ ಗೃಹ ಸಚಿವರಾದ ಡಾ.ಜಿ. ಪರಮೇಶ್ವರ್ ರವರಿಗೆ ವಿಶೇಷವಾದ ಧನ್ಯವಾದಗಳನ್ನ ಗ್ರಾಮಸ್ಥರು ತಿಳಿಸಿದರು.
ಹಂಚಿಮಾರನಹಳ್ಳಿ ಗ್ರಾಮಸ್ಥರ ದಿಟ್ಟ ಹೋರಾಟಕ್ಕೆ ಕೊನೆಗೂ ಯಶಸ್ಸು ಸಿಕ್ಕಂತಾಗಿದೆ. ಕೊರಟಗೆರೆ ತಾಲೂಕು ಪಂಚಾಯಿತಿ ಇ ಓ ಅಪೂರ್ವ ಸಿ ಮತ್ತು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ಕೀರ್ತಿ ನಾಯಕ್ ಗ್ರಾಮಸ್ಥರ ಹಪ್ರತಿಭಟನೆಯ ಮರುದಿನವೇ ಸ್ಥಳ ಪರಿಶೀಲಿಸಿ ಶೀಘ್ರವೇ ಗ್ರಾಮಸ್ಥರ ಮನೆ ಮನೆಗೆ ನೀರು ಪೂರೈಸುವ ಭರವಸೆ ನೀಡಿ ಗ್ರಾಮಸ್ಥರಿಗೆ ಶುಭ ಹಾರೈಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಘುನಂದನ್, ಕಾರ್ಯದರ್ಶಿ ನರಸಿಂಹಮೂರ್ತಿ,ಸದಸ್ಯರಾದ ರವಿಕುಮಾರ್, ಸಾಮಾಜಿಕ ಹೋರಾಟಗಾರ ರಾಜ ರವೀಂದ್ರ ನಾಯಕ, ಪತ್ರಕರ್ತ ಮಂಜುಸ್ವಾಮಿ ಎಂ ಎನ್, ಹನುಮಂತರಾಯಪ್ಪ, ಸುರೇಶ್, ನಾಗರಾಜು, ಪರಂದಾಮಯ್ಯ, ಶಿವರತ್ನಮ್ಮ, ಮಂಜುನಾಥ್, ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿವರ್ಗ ಹಾಜರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ.


