ಸರಗೂರು : ಕನಕದಾಸರು ಕುಲವಿಲ್ಲದ ನೆಲೆಗಾಗಿ ನಡೆದಾಡಿದ ಸಂತ ಕವಿ ಮತ್ತು ದಾರ್ಶನಿಕ 15 — 16ನೇ ಶತಮಾನದಲ್ಲಿ ಜಾತಿ ವ್ಯವಸ್ಥೆ ವಿರುದ್ಧ ಸಮರ ಸಾರಿದ ಮಹಾನ್ ವ್ಯಕ್ತಿ ಎಂದು ಗ್ರಂಥಾಲಯ ಮೇಲ್ವಿಚಾರಕ ಬಿಡಗಲು ಶಿವಣ್ಣ ಅಭಿಮತ ವ್ಯಕ್ತಪಡಿಸಿದರು.
ಪಟ್ಟಣ ಸರ್ಕಾರಿ ಗ್ರಂಥಾಲಯದಲ್ಲಿ ಸಂತ ಕವಿ, ದಾಸಶ್ರೇಷ್ಠ. ಶ್ರೀ ಭಕ್ತ ಕನಕದಾಸರ 538ನೇ ಜಯಂತ್ಯೋತ್ಸವ. ಅಚರಿಸಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಸಮಾಜ ಸುಧಾರಕ, ಮೌಢ್ಯದ ವಿರುದ್ಧ ಜನರಲ್ಲಿ ಅರಿವು ಮೂಡಿಸಲು ಶ್ರಮಿಸಿದ ಮಹಾಪುರುಷ ಸರ್ವಧರ್ಮ ಸಹಿಷ್ಣುತೆಯನ್ನು ಜಗತ್ತಿಗೆ ಸಾರಿದ ಕನಕದಾಸರ ಕೀರ್ತನೆಗಳ ವಿಚಾರಗಳು ಎಂದಿಗೂ ಪ್ರಸ್ತುತ ಕನಕದಾಸರ ಕೀರ್ತನೆಗಳು ಮೌಢ್ಯವನ್ನು ಧಿಕ್ಕರಿಸುವುದರೊಂದಿಗೆ ಸ್ತ್ರೀ ಪರವಾದ ಚಿಂತನೆಗಳನ್ನು ಕಟ್ಟಿಕೊಟ್ಟು ಸಮಾಜದ ಒಳಿತಿಗಾಗಿ ಪದವಿ, ಸಿರಿತನವನ್ನು ತ್ಯಾಗ ಮಾಡಿದರ ಮೊದಲ ಸಾಲಿನಲ್ಲಿ ಕನಕದಾಸರು ಶ್ರೇಷ್ಠರಾದರು ಎಂದರು.
“ಕುಲ ಕುಲವೆಂದು ಹೊಡೆದಾಡದಿರಿ. ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರಾ ಎಂಬ ಕೀರ್ತನೆಯ ಮೂಲಕ ಸಮಾಜವನ್ನು ಪ್ರಶ್ನಿಸುವುದರಲ್ಲಿಯೇ ಪರಿಹಾರವನ್ನು ಸೂಚಿಸಿರುವುದರ ಮೂಲಕ ಸಂತ ಕವಿ, ದಾಸಶ್ರೇಷ್ಠರಾಗಿ ಇಡಿ ಮಾನವಕುಲಕ್ಕೆ ಒಳ್ಳೆಯ ಸಂದೇಶ ನೀಡಿದರು. ಅವರ ಕೀತ೯ನೆಗಳನ್ನು ಇಂದಿನ ವಿದ್ಯಾರ್ಥಿಗಳು, ಮೈಗೂಡಿಸಿಕೊಂಡು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಬೇಕು ಎ೦ದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಓದುಗರಾದ ದೀಕ್ಷಿತ, ಸಂಪತ್ ಕುಮಾರ್, ಜೀವನ್ , ತರುಣ್ , ಎಂ.ಎಸ್. ಸುಮಂತ್, ದಿಗಂತ್, ವಿಜಯ್, ಲತೇಶ್ , ವಿನೋದ್ , ಮಧು ಎಸ್.ಜಿ. ಸ್ಮಿತಾ ಪಿ , .ಸಹಾಯಕಿ ವರ್ಷ ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


