ನಾನು ನಿಂತ ನೀರಲ್ಲ ಹರಿಯುವ ನೀರು ಎಂದು ಮಾಜಿ ಸಚಿವ ವಿ. ಸೋಮಣ್ಣ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪಕ್ಷದ ಅಸಮಧಾನ ಕುರಿತು ಚರ್ಚೆಯ ಬಗ್ಗೆ ಮಾತನಾಡಿದರು. ಸೋಮಣ್ಣ ನಿಂತ ನೀರಲ್ಲ. ಹರಿಯುವ ನೀರು ಎಂದು ಹೇಳಿದರು. ನನಗಾದ ನೋವು ಇನ್ಯಾರಿಗೋ ಆಗಿದ್ರೆ ವಾಪಸ್ ಬರ್ತಿರಲಿಲ್ಲ ಎಂದು ಹೇಳಿದರು. ಹೈಕಮಾಂಡ್ ಎರಡು ಬಾರಿ ಕರೆದರು, ನಾನೇ ಹೋಗಿಲ್ಲ. ಕೆಲವರ ಸಮ್ಮುಖದಲ್ಲಿ ಚರ್ಚೆ ನಡೆಸುವಂತೆ ಕೇಳಿದ್ದೇನೆ. 6 ಅಥವಾ 7 ನೇ ತಾರೀಕಿನ ನಂತರ ಕರೆದರೆ ಹೋಗ್ತೇನೆ ಎಂದು ಸೋಮಣ್ಣ ಹೇಳಿದರು.
ಯಾವುದೇ ಕಾರಣಕ್ಕೂ ನಾನು ಬಿಜೆಪಿ ತೊರೆಯಲ್ಲ ಎಂದು ಮಾಜಿ ಸಚಿವ ಸೋಮಣ್ಣ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಪಕ್ಷದ ನಾಯಕರು ನೀಡುವ ಯಾವುದೇ ಜವಾಬ್ದಾರಿಯನ್ನು ನಿಭಾಯಿಸಲು ಸಿದ್ಧ. ‘ಆಂತರಿಕ ಹೊಂದಾಣಿಕೆ’ಯಿಂದ ನಾನು ಸಾಕಷ್ಟು ನೊಂದಿದ್ದೇನೆ. ನನ್ನ ಮೇಲೆ ಪ್ರಹಾರವಾಗಿದೆ. ಯಾರೋ ನನಗೆ ಮಾಟ ಮಾಡಿಸಿರಬಹುದೇನೋ, ನಾನೇ ಹೋಗಿ ನಾಲ್ಕೂವರೆ ಅಡಿ ಗುಂಡಿಯೊಳಗೆ ಬಿದ್ದೆ ಎಂದು ಮತ್ತೊಮ್ಮೆ ಅಸಮಾಧಾನ ಹೊರಹಾಕಿದರು.
ವಿಧಾನಸಭಾ ಚುನಾವಣೆಯಲ್ಲಿ ಸ್ವಕ್ಷೇತ್ರ ಬಿಟ್ಟು ಬೇರೆ ಎರಡು ಕಡೆ ಸ್ಪರ್ಧಿಸುವ ಮೂಲಕ ನಾನಾಗಿಯೇ ಹೋಗಿ ನಾಲ್ಕೂವರೆ ಅಡಿ ಹಳ್ಳಕ್ಕೆ ಬಿದ್ದೆ ಎಂದು ಬಿಜೆಪಿ ಮಾಜಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ. ಜ. 9 ರಂದು ದೆಹಲಿಗೆ ಹೋಗುತ್ತಿದ್ದೇನೆ. ನನಗೆ ತೊಂದರೆ ನೀಡಿದವರನ್ನು ಎದುರಿಗೇ ಕರೆಸಿ ಸೂಚನೆ ಕೊಡಲು ಹೈಕಮಾಂಡ್ ನಾಯಕರಿಗೆ ತಿಳಿಸಿದ್ದೇನೆ ಎಂದರು. ಅದ್ಯಾರು ಮಾಟಮಂತ್ರ ಮಾಡಿಸಿದರೋ ಗೊತ್ತಿಲ್ಲ. ಗೋವಿಂದರಾಜನಗರದಲ್ಲಿ ಸ್ಪರ್ಧಿಸದೇ ಹೋಗಿ ವರುಣಾದಲ್ಲಿ ಸ್ಪರ್ಧಿಸಿದೆ ಎಂದರು.


