ಧಾರವಾಡ: ಓದಿನ ಕಡೆ ಗಮನಹರಿಸು ತಂದೆ ಬುದ್ಧಿವಾದ ಹೇಳಿದಕ್ಕೆ ಮನನೊಂದ ಮಗ ಆತ್ಮಹತ್ಯೆಗೆ ಶರಣಾದ ಘಟನೆ ಧಾರವಾಡ ನಗರದ ಸಾದನಕೇರಿ ಬಡಾವಣೆಯಲ್ಲಿ ನಡೆದಿದೆ. ಧಾರವಾಡ ನಗರದ ಕೆಲಗೇರಿ ಕೆರೆಗೆ ಹಾರಿ ಫುಟ್ಬಾಲ್ ಆಟಗಾರ ಚೇತನ್ ಕೊಂಡಿಹಾಳ(23) ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
‘ಕ್ರೀಡೆಗೆ ಆಸಕ್ತಿ ಕಡಿಮೆ ಕೊಟ್ಟು, ಓದಿನ ಕಡೆ ಗಮನಹರಿಸು’ ಎಂದು ತಂದೆ ಬುದ್ದಿವಾದ ಹೇಳಿದಕ್ಕೆ ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶರಣಪ್ಪ ಕೊಂಡಿಹಾಳ ಎಂಬುವರ ಮೃತ ಪುತ್ರ ಚೇತನ್ ಮೃತಪಟ್ಟಿದ್ದಾನೆ.
ಚೇತನ್ ಗೆ ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ಇತ್ತು. ಮಗನ ಆಸಕ್ತಿಯಿಂದಾಗಿ ಓದಿಗೆ ಸಮಸ್ಯೆ ಆಗಬಾರದೆಂದುಕೊಂಡ ಶರಣಪ್ಪ ಕೊಂಡಿಹಾಳ ಅವರು ತಮ್ಮ ಮಗನಿಗೆ ಬುದ್ಧಿ ಹೇಳಿದ್ದಾರೆ. ಇಷ್ಟಕ್ಕೆ ಮನನೊಂದ ಚೇತನ್ ಮನೆಯಿಂದ ನಾಪತ್ತೆಯಾಗಿದ್ದ. ಈಗ ಎರಡು ದಿನಗಳ ನಂತರ ಕೆಲಗೇರಿ ಕೆರೆಯಲ್ಲಿ ಚೇತನ್ ಮೃತದೇಹ ಪತ್ತೆಯಾಗಿದೆ. ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


