ಬೆಂಗಳೂರು: ತೆಲಂಗಾಣ ಮತ್ತು ತಮಿಳುನಾಡಿನ ಬಗ್ಗೆ ರಾಜ್ಯ ಸರ್ಕಾರದ ಒಲವು ತೋರಿದ್ದು ಮತ್ತೊಮ್ಮೆ ಕನ್ನಡಿಗರಿಗೆ ದ್ರೋಹ ಬಗೆದಿದೆ ಎಂದು ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂಡಿಯಾ ಮಿತ್ರ ಪಕ್ಷ ಡಿಎಂಕೆ ಮೆಚ್ಚಿಸಲು ಕದ್ದುಮುಚ್ಚಿ ಕಾವೇರಿ ನೀರನ್ನು ತಮಿಳುನಾಡಿಗೆ ಬಿಟ್ಟಿದ್ದ ರಾಜ್ಯ ಕಾಂಗ್ರೆಸ್ ಗೆ ರಾತ್ರೋರಾತ್ರಿ ತೆಲಂಗಾಣ ರಾಜ್ಯದ ಮೇಲೆ ಪ್ರೇಮಾಂಕುರವಾಗಿದೆ ಎಂದಿರುವ ಅವರು, ವಿಜಯಪುರದ ಆಲಮಟ್ಟಿ ಜಲಾಶಯದಿಂದ ಫೆ. 20 ಮತ್ತು 21 ರಂದು ತೆಲಂಗಾಣ ರಾಜ್ಯಕ್ಕೆ 1.27 ಟಿಎಂಸಿ ಅಡಿ ನೀರನ್ನು ಉಡುಗೊರೆಯಾಗಿ ನೀಡಲಾಗಿದೆ ಎಂದು ತಮ್ಮ ಸಾಮಾಜಿಕ ಜಾಲತಾಣ ಪೋಸ್ಟ್ ನಲ್ಲಿ ನಿಖಿಲ್ ಆರೋಪಿಸಿದ್ದಾರೆ.
ರಾಜ್ಯದ ರೈತರಿಗೆ ನೀರು ಬಿಡುವಲ್ಲಿ ಒಂದು ಸೆಕೆಂಡ್ ಕೂಡಾ ಹೆಚ್ಚಾಗದಂತೆ ಸಮಯ ಪಾಲನೆ ಮಾಡುವ ಅಧಿಕಾರಿಗಳು ಇದರ ಬಗ್ಗೆ ಏನು ಹೇಳುತ್ತಾರೆ? ಎಂದು ಪ್ರಶ್ನಿಸಿದ ಅವರು, ರಾಜ್ಯದ ಜನತೆಗೆ ಮುಂದೆ ಕುಡಿಯುವ ನೀರು ಮತ್ತು ಬೇಸಿಗೆ ಬೆಳೆಗೆ ನೀರಿನ ಕೊರತೆಯಾದರೆ ಯಾರನ್ನು ದೂಷಿಸುವಿರಿ? ಪ್ರಶ್ನಿಸಿದರಲ್ಲದೇ, ಈ ಸರ್ಕಾರಕ್ಕೆ ರೈತರ ಶಾಪವಂತೂ ತಟ್ಟುವುದು ಶತ ಸಿದ್ದ ಎಂದಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4