ತುಮಕೂರು: ವಿವೇಕಾನಂದ ಕ್ರೀಡಾ ಸಂಸ್ಥೆ ವತಿಯಿಂದ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ರಾಜ್ಯ ಮಟ್ಟದ ಕೊಕ್ಕೊ ಪಂದ್ಯಾವಳಿ ಅಂತಿಮ ಹಂತ ತಲುಪಿದೆ. ಭಾನುವಾರ ಸೆಮಿಫೈನಲ್, ಫೈನಲ್ ಪಂದ್ಯಗಳು ನಡೆಯಲಿವೆ.
ಶುಕ್ರವಾರ ಸಂಜೆ ಟೂರ್ನಿಗೆ ಚಾಲನೆ ನೀಡಲಾಯಿತು. ಶನಿವಾರ ಲೀಗ್ ಹಂತದ ಪಂದ್ಯಗಳು ನಡೆದವು. ಪುರುಷರ ವಿಭಾಗದಲ್ಲಿ 13, ಮಹಿಳೆಯರ ವಿಭಾಗದಲ್ಲಿ 8 ತಂಡಗಳು ಪಾಲ್ಗೊಂಡಿವೆ. ತುಮಕೂರು, ದಾವಣಗೆರೆ, ಮೈಸೂರು, ರಾಯಚೂರು, ಶಿವಮೊಗ್ಗ ಸೇರಿ ವಿವಿಧ ಜಿಲ್ಲೆಗಳ ಆಟಗಾರರು ಭಾಗವಹಿಸಿದ್ದಾರೆ.
ಅಯೋಜಕರು ಕ್ರೀಡಾಪಟುಗಳ ವಾಸ್ತವ್ಯಕ್ಕೆ ಅಗತ್ಯ ವ್ಯವಸ್ಥೆ ಮಾಡಿದ್ದಾರೆ. ಜೂನಿಯರ್ ಕಾಲೇಜು ಮೈದಾನದ ಮಿನಿ ಕ್ರೀಡಾಂಗಣದಲ್ಲಿ ಎರಡು ಕೊಕ್ಕೊ ಅಂಕಣ ಸಿದ್ಧಪಡಿಸಲಾಗಿದೆ. ಕ್ರೀಡಾಪಟುಗಳ ರಕ್ಷಣೆ ದೃಷ್ಟಿಯಿಂದ ಮ್ಯಾಟ್ ಅಳವಡಿಸಲಾಗಿದೆ. ಪಂದ್ಯಾವಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಪಂದ್ಯಗಳ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯ ಜನ ಸೇರುತ್ತಿದ್ದಾರೆ.
ಕ್ರೀಡಾಕೂಟದ ಪ್ರತಿ ಪಂದ್ಯವು ರೋಚಕತೆ ಹೆಚ್ಚಿಸುತ್ತಿದೆ. ಮೊದಲ ಪಂದ್ಯದಿಂದಲೇ ಮೂಡುಬಿದಿರೆಯ ಆಳ್ವಾಸ್ ತಂಡಗಳು ಉತ್ತಮ ಪ್ರದರ್ಶನದೊಂದಿಗೆ ಮುನ್ನಡೆಯುತ್ತಿವೆ. ಮಹಿಳೆಯರ ವಿಭಾಗದಲ್ಲಿ ಮೈಸೂರಿನ ಕುರುಬೂರು ಕೊಕ್ಕೊ ತಂಡದ ಆಟಗಾರ್ತಿಯರು ಪ್ರತಿ ಪಂದ್ಯದಲ್ಲಿ ಗಮನ ಸೆಳೆಯುತ್ತಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC