ಜೈಪುರ: ಜೆಇಇ ಪರೀಕ್ಷಾರ್ಥಿಯೊಬ್ಬರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ. ನಿಹಾರಿಕ (18) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ.
ಜನವರಿ 31 ರಂದು ಜೆಇಇ ಮುಖ್ಯಪರೀಕ್ಷೆ ಇದ್ದರಿಂದ ನಿಹಾರಿಕಾ ತಯಾರಿ ನಡೆಸುತ್ತಿದ್ದಳು. ಆದರೆ ಆಕೆ ಪರೀಕ್ಷೆಗೆ ಇನ್ನೆರಡು ದಿನಗಳಿರುವಾಗಲೇ ತನ್ನ ಮನೆಯ ಕೊಠಡಿಯಲ್ಲಿ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಡೆತ್ ನೋಟ್: ಮಮ್ಮಿ-ಪಪ್ಪಾ ನಾನು ಜೆಇಇ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನಾನು ಸೋತಿದ್ದೇನೆ, ಇದಕ್ಕೆ ನಾನೇ ಕಾರಣ. ನಾನು ಕೆಟ್ಟ ಮಗಳು. ನನ್ನನ್ನು ಕ್ಷಮಿಸಿ, ಮಮ್ಮಿ-ಪಪ್ಪಾ ಇದು ನನ್ನ ಕೊನೆಯ ಆಯ್ಕೆಯಾಗಿದೆ ಎಂದು ಬರೆದಿಟ್ಟಿದ್ದಾಳೆ.


