ದೌಲತಾಬಾದ್: ಪಶ್ಚಿಮ ಬಂಗಾಳದ ಮುರ್ಷಿಬಾದ್ನ ಶಾಲೆಯೊಂದರ ಬಳಿ ಗುರುವಾರ ಮಧ್ಯಾಹ್ನ ಊಟದ ವೇಳೆ ಬಾಂಬಾ ಸ್ಫೋಟಗೊಂಡು 2 ನೇ ತರಗತಿಯ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ. ಮೃತ ವಿದ್ಯಾರ್ಥಿಯನ್ನು ಮಕ್ಲೇಸೂರ್ ರೆಹಮಾನ್ (7) ಎಂದು ಗುರುತಿಸಲಾಗಿದೆ.
ಈ ಸ್ಫೋಟದಿಂದ ಅನೇಕರಿಗೆ ಗಾಯಗಳಾಗಿವೆ. ದೌಲತಾಬಾದ್ ಪೊಲೀಸ್ ಠಾಣೆ ಬಳಿ ಈ ಘಟನೆ ನಡೆದಿದೆ. ಇನ್ನು ಪೊಲೀಸರು ಹಾಗೂ ಸ್ಥಳೀಯ ಪ್ರಕಾರ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಊಟ ಮಾಡಿ ಹೊರಗಡೆ ಬರಬೇಕಾದರೆ ಚೆಂಡಿನಂತಿರುವ ಬಾಂಬ್ ಕೈಯಲ್ಲಿ ಹಿಡಿದು, ಸ್ನೇಹಿತರೊಂದಿಗೆ ಆಟವಾಡುತ್ತಿದ್ದ ಈ ವೇಳೆ ರೆಹಮಾನ್ ಚೆಂಡಿನಂತಿರುವ ಬಾಂಬ್ ಗೋಡೆ ಎಸೆದಿದ್ದಾನೆ, ಈ ವೇಳೆ ಬಾಂಬ್ ಸ್ಫೋಟಗೊಂಡಿದೆ. ಈ ವೇಳೆ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಇನ್ನು ಪೋಷಕರು ಶಾಲಾ ಮಂಡಳಿಯ ವಿರುದ್ಧ ಆಕ್ರೋಶಗೊಂಡಿದ್ದಾರೆ. ಬಾಂಬ್ ಸ್ಫೋಟದ ಶಬ್ದ ಕೇಳಿ ಸ್ಥಳೀಯರು ಶಾಲೆಯತ್ತ ಬಂದಿದ್ದಾರೆ. ಸ್ಫೋಟದಿಂದ ಬಾಲಕ ಸಾವನ್ನಪ್ಪಿದ್ದಾನೆ. ಹಾಗೂ ಅನೇಕರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿದ್ದಾರೆ. ಇನ್ನು ಬಾಲಕನ ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಸಾಗಿಸಿದ್ದಾರೆ.


