ತುಮಕೂರು : ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ಪರವಾಗಿ ಅತ್ಯಂತ ಮಹತ್ವದ ತೀರ್ಪು ನೀಡಿದ ಸುಪ್ರೀಂ ಕೋರ್ಟ್ ನ ತೀರ್ಪು ಶ್ಲಾಘನೀಯವಾದದ್ದು, ಇದನ್ನು ದಲಿತ ಸಂರಕ್ಷಣಾ ಸಮಿತಿ ಹಾಗೂ ದಲಿತಪರ ಸಂಘಟನೆಗಳು ಸ್ವಾಗತಿಸುವುದರ ಜೊತೆಗೆ ಹರ್ಷ ವ್ಯಕ್ತಪಡಿಸುತ್ತದೆ ಮತ್ತು 30 ವರ್ಷಗಳ ನಿರಂತರವಾದ ಹೋರಾಟಗಾರರ ಹೋರಾಟಕ್ಕೆ ಬೆಲೆ ಸಿಕ್ಕಂತಾಗಿದೆ ಎಂದು ದಲಿತ ಸಂರಕ್ಷಣಾ ಸಮಿತಿ ರಾಜ್ಯ ಸಂಚಾಲಕರು ಸಾಮಾಜಿಕ ಹೋರಾಟಗಾರ ಚಲನಚಿತ್ರ ನಟ ಜೆಟ್ಟಿ ಅಗ್ರಹಾರ ನಾಗರಾಜು ಟೈಗರ್ ನಾಗ್ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಒಳ ಮೀಸಲಾತಿಯಿಂದ ಸಮಾನತೆಗೆ ಯಾವುದೇ ಧಕ್ಕೆ ಇಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ, ಎಸ್ ಸಿ ಎಸ್ ಟಿ ಮೀಸಲಾತಿಯಲ್ಲಿ ಉಪ ವರ್ಗೀಕರಣ ಅಧಿಕಾರ ಆಯಾ ರಾಜ್ಯಗಳಿಗೆ ಇದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರ ಚೂಡ ಅವರಿಂದ ಸಂವಿಧಾನಿಕ ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ, ಉಪಪಂಗಡಗಳ ಒಳ ಮೀಸಲಾತಿಯಿಂದ ಸಮಾನತೆಯ ನಿಯಮ ಉಲ್ಲಂಘನೆ ಆಗಲ್ಲ ಎಂದು ಒಳ ಮೀಸಲಾತಿ ಪರವಾಗಿ ತೀರ್ಪು ಐತಿಹಾಸಿ ತೀರ್ಪು ನೀಡಿರುವುದು ಸ್ವಾಗತಾರ್ಹವಾಗಿದೆ ಎಂದು ಅವರು ತಿಳಿಸಿದರು.
ಈ ಹೋರಾಟಕ್ಕೆ ಹಲವು ಜನ ಪ್ರಾಣ ತ್ಯಾಗ ಮಾಡಿರುವುದು ಹಲವು ವಿಭಿನ್ನ ತ್ಯಾಗ ಬಲಿದಾನಗಳಾಗಿವೆ. 30 ವರ್ಷಗಳ ಹೋರಾಟದ ಪ್ರತಿಫಲ ಇಂದು ಎಸ್ಸಿ ಎಸ್ಟಿ ಸಮಾಜಕ್ಕೆ ನ್ಯಾಯ ಲಭಿಸಿದೆ. 2006 ರಿಂದ ನಾನು ಕೂಡ ಹೋರಾಟದಲ್ಲಿ ನಿರಂತರ ತೊಡಗಿಕೊಂಡು ಹಲವು ಕೇಸುಗಳನ್ನ ಹಾಕಿಸಿಕೊಂಡಿದ್ದೇನೆ. ಪಾವಗಡ ಶ್ರೀರಾಮ್ ಅವರ ನೇತೃತ್ವದಲ್ಲಿ ದೆಹಲಿ ಚಲೋ ವಿಧಾನಸೌಧ ಚಲೋ, ವಿಧಾನಸೌಧ ಮುತ್ತಿಗೆ, ಪಂಜಿನ ಮೆರವಣಿಗೆ ಪುಟಗೋಸಿ ಮೆರವಣಿಗೆ, ಉಪವಾಸ ಸತ್ಯಾಗ್ರಹ, ಪಾದಯಾತ್ರೆ ಸೈಕಲ್ ಜಾಥಾ ಸೇರಿದಂತೆ ಹಲವು ವಿಭಿನ್ನ ಪ್ರತಿಭಟನೆಗಳಲ್ಲಿ ನಾನು ಕೂಡ ಭಾಗಿಯಾಗಿದ್ದೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ. ಅದೆಲ್ಲದರ ಫಲವೇ ಈ ಸಂವಿಧಾನ ಬದ್ಧ ತೀರ್ಪು ಸಂತಸ ತಂದಿದೆ ಎಂದು ಜೆಟ್ಟಿ ಅಗ್ರಹಾರ ನಾಗರಾಜ್ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296