ಬೆಂಗಳೂರು: ಮನೆಯ ಸ್ನಾನದ ಕೋಣೆಯಲ್ಲಿ ಪತಿಯನ್ನು ಕೂಡಿಹಾಕಿ ಪತ್ನಿ ಪರಾರಿಯಾಗಿದ್ದು, ಈ ಸಂಬಂಧ ರಾಜರಾಜೇಶ್ವರಿನಗರ ಠಾಣೆಗೆ ದೂರು ಸಲ್ಲಿಕೆಯಾಗಿದೆ. ಠಾಣೆ ವ್ಯಾಪ್ತಿಯ ನಿವಾಸಿಯೊಬ್ಬರು, ಪತ್ನಿಯನ್ನು ಹುಡುಕಿ ಕೊಡುವಂತೆ ದೂರು ನೀಡಿದ್ದಾರೆ. ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಆಗಸ್ಟ್ 12ರಂದು ಪತಿಯನ್ನು ಸ್ನಾನ ಮಾಡಲು ಕಳುಹಿಸಿದ್ದ ಪತ್ನಿ, ಹೊರಗಿನಿಂದ ಬಾಗಿಲು ಹಾಕಿಕೊಂಡು ಮನೆಯಿಂದ ಪರಾರಿಯಾಗಿದ್ದಾರೆ’ ಎಂದು ತಿಳಿಸಿವೆ.