ಬಿಹಾರ: 18 ವರ್ಷದ ಯುವಕನೊಬ್ಬ ಐಪಿಎಸ್ ಅಧಿಕಾರಿಯಂತೆ ಸಮವಸ್ತ್ರ ಧರಿಸಿ, ಪಿಸ್ತೂಲ್ ಹಿಡಿದುಕೊಂಡು ತಿರುಗಾಡಿದ ಘಟನೆ ಬಿಹಾರದ ಜುಮುಯಿಯಲ್ಲಿ ನಡೆದಿದ್ದು, ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಯುವಕನನ್ನ ವಶಕ್ಕೆ ಪಡೆದುಕೊಂಡಿದ್ದಾರೆ.
ಜಮುಯಿ ಜಿಲ್ಲೆಯಲ್ಲಿ ಸಮೋಸಾ ಮತ್ತು ಪಾನೀಯ ಮಾರಾಟ ಮಾಡುತ್ತಿದ್ದ ಈ ಯುವಕ ಮಿಥ್ಲೇಶ್ ಮಾಂಝಿ ಸಡನ್ ಆಗಿ ಪೊಲೀಸ್ ಸಮವಸ್ತ್ರ ಧರಿಸಿಕೊಂಡು ಅಚ್ಚರಿ ಸೃಷ್ಟಿಸಿದ್ದ. ಈತನನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಬಂದ ಪೊಲೀಸರು ಮಿಥ್ಲೇಶ್ ಮಾಂಝಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರು ವಿಚಾರಣೆ ನಡೆಸಿದ ವೇಳೆ “ನಾನು ಐಪಿಎಸ್ ಅಧಿಕಾರಿ” ಅಂತ ಯುವಕ ಹೇಳಿಕೊಂಡಿದ್ದಾನಂತೆ.
ಪೊಲೀಸರು ತಮ್ಮ ಶೈಲಿಯಲ್ಲಿ ವಿಚಾರಿಸಿದಾಗ ಐಪಿಎಸ್ ಅಧಿಕಾರಿಯ ಸಮವಸ್ತ್ರ ಪಡೆಯಲು 2ಲಕ್ಷ ವ್ಯಕ್ತಿಯೊಬ್ಬರಿಗೆ ಹಣ ನೀಡಿರುವುದಾಗಿ ಆತ ಹೇಳಿಕೊಂಡಿದ್ದಾನೆ.
ಇದರಲ್ಲಿ ಭಾಗಿಯಾಗಿರುವ ಎಲ್ಲಾ ಗ್ಯಾಂಗ್ ಸದಸ್ಯರನ್ನು ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q