ಸರಗೂರು: ಬಿರು ಬಿಸಿಲಿನ ಬೇಸಿಗೆ ರಜೆ ಮಜಾ ಅನುಭವಿಸಿದ್ದ ಮಕ್ಕಳು ಮತ್ತೆ ಶಾಲೆಯತ್ತ ಮರಳುತ್ತಿದ್ದು, ಮೇ 31 ಶುಕ್ರವಾರಂದು ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳನ್ನು ಜೆಎಸ್ಎಸ್ ವಿದ್ಯಾ ಸಂಸ್ಥೆಯ ಮುಖ್ಯೋಪಾಧ್ಯಾಯ ಹಾಗೂ ಶಿಕ್ಷಕರು ಸ್ವಾಗತಿಸಿದರು.
ತಾಲ್ಲೂಕಿನ ಪಟ್ಟಣದ ಜೆಎಸ್ಎಸ್ ಶಾಲೆ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ ಕಾಲೇಜು ವತಿಯಿಂದ ಶಾಲೆಯನ್ನು ಸಿಂಗಾರಗೊಳಿಸಿ, ಮಕ್ಕಳನ್ನು ಪ್ರೀತಿಯಿಂದ ಬರಮಾಡಿಕೊಂಡರು.
ಜೆಎಸ್ಎಸ್ ಶಾಲೆ ಮುಖ್ಯೋಪಾಧ್ಯಾಯ ಮಹಮದ್ ಅಜಂಪಾಷ ಪ್ರತಿ ವರ್ಷದಂತೆ ಶೈಕ್ಷಣಿಕ ವರ್ಷ ಆರಂಭದಲ್ಲಿ ವಿದ್ಯಾರ್ಥಿಗಳನ್ನು ವಿನೂತನವಾಗಿ ಸ್ವಾಗತಿಸುವ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ಶಿಕ್ಷಕರು ಶಾಲೆಯನ್ನು ಸಿದ್ಧಗೊಳಿಸಿ, ಶಾಲೆಯನ್ನು ತಳಿರು ತೋರಣಗಳಿಂದ ಅಲಂಕರಿಸಿ, ಮಕ್ಕಳಿಗೆ ಸಿಹಿ ನೀಡಿ ಮುಂದಿನ ತರಗತಿಗೆ ಸ್ವಾಗತಿಸಿದರು.
ಪ್ರಾಥಮಿಕ ಮತ್ತು ಪ್ರೌಢ ಸೇರಿದಂತೆ 1500 ಶಾಲೆಯಲ್ಲಿ ಮಕ್ಕಳು ಇದ್ದಾರೆ. ಶಾಲಾ ಪ್ರಾರಂಭೋತ್ಸವದ ಕಾರ್ಯ ಚಟುವಟಿಕೆ ಕುರಿತಂತೆ ಶಿಕ್ಷಕರಿಗೆ ಈಗಾಗಲೇ ಮಾರ್ಗಸೂಚಿ ನೀಡಿದ್ದು, ಮೇ 29ರಂದು ಶಾಲೆಯ ಸ್ವಚ್ಛತೆ, ಮೂಲ ಸೌಲಭ್ಯಗಳ ಪರಿಶೀಲನೆ ನಡೆದಿದ್ದು, ಮೇ 31 ರಂದು ಅದ್ಧೂರಿಯಾಗಿ ಶಾಲಾ ಪ್ರಾರಂಭೋತ್ಸವ ನಡೆಯಿತು.
ವಿದ್ಯಾರ್ಥಿಗಳ ಹಾಜರಾತಿ ಮತ್ತು ಶಾಲೆಗಳ ಬೇಡಿಕೆಗೆ ಅನುಗುಣವಾಗಿ ಶೇ. 90ರಷ್ಟು ಪಠ್ಯಪುಸ್ತಕ ಈಗಾಗಲೇ ಸರಬರಾಜು ಆಗಿದೆ. ಶಾಲೆ ಆರಂಭವಾಗುತ್ತಿದ್ದಂತೆ ಎಲ್ಲ ವಿದ್ಯಾರ್ಥಿಗಳಿಗೆ ಪಠ್ಯ ದೊರೆಯಲಿದೆ. ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ ಬೇಡಿಕೆ ಅನುಗುಣವಾಗಿ ಪಠ್ಯದ ಬೇಡಿಕೆಯನ್ನು ವಿದ್ಯಾಪೀಠ ಸಲ್ಲಿಸಲಾಗಿದೆ. ಬೇಡಿಕೆಯ ಶೇ. 10ರಷ್ಟು ಪಠ್ಯಗಳನ್ನು ಹೆಚ್ಚುವರಿಯಾಗಿ ಕಳುಹಿಸಿರುವ ಕಾರಣ, ಬಹುತೇಕ ಎಲ್ಲ ಮಕ್ಕಳಿಗೆ ಶಾಲೆ ಆರಂಭದಲ್ಲಿಯೇ ಪಠ್ಯ ಪೂರ್ಣ ಪ್ರಮಾಣದಲ್ಲಿ ದೊರೆಯುವ ವಿಶ್ವಾಸವಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರ ವೃಂದಾ ಜಯಲಕ್ಷ್ಮಿ, ಶೋಭಾ ರಾಣಿ, ಶೀಲಾ, ರಂಜಿನಿ ಅರಸ್, ಶಿಲ್ಪ, ಶ್ವೇತಾ, ಮಹದೇವಸ್ವಾಮಿ, ಕೃಷ್ಣಮೂರ್ತಿ, ಮಂಜುನಾಥ್, ಜಯಣ್ಣ, ಶಂಕರ್, ಅನಿತಾ, ನಂದಿನಿ ಉಪಸ್ಥಿತರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296