ಪಾವಗಡ: ತಾಲೂಕಿನ ಹಲವು ದೇವಾಲಯಗಳು ಮತ್ತು ಮನೆಯೊಂದರಲ್ಲಿ ಕಳ್ಳತನ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪಾವಗಡ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಇನ್ನೂ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.
ಬಂಧಿತ ಆರೋಪಿಗಳು ಆಂಧ್ರಪ್ರದೇಶದ ಬದಲಾಪುರ ಗ್ರಾಮದ ನರಸಿಂಹ ಮತ್ತು ಪಾವಗಡ ತಾಲೂಕಿನ ಕ್ಯಾತಗಾನಚರ್ಲು ಗ್ರಾಮದ ತಿಪ್ಪೇಸ್ವಾಮಿ ಎಂದು ಗುರುತಿಸಲಾಗಿದೆ. ಇವರಿಂದ 2 ಕೆ.ಜಿ. 630 ಗ್ರಾಂ ಬೆಳ್ಳಿ ಹಾಗೂ 20 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ.
ಕಳ್ಳತನ ನಡೆದ ಸ್ಥಳಗಳು:
ಉಪ್ಪಾರಹಳ್ಳಿ ಕಾಳಿಕಾ ದೇವಸ್ಥಾನ, ಸೇವಾಲಾಲ್ ಪುರ ಗ್ರಾಮದ ಕರಿಯಮ್ಮನ ದೇವಸ್ಥಾನ, ಫ್ರೆಂಡ್ಲಿಜೀವಿ ಆಂಜನೇಯ ಸ್ವಾಮಿ ದೇವಸ್ಥಾನ, ರಾಯಚರ್ಲು ಅಕ್ಕಮ್ಮ ದೇವಸ್ಥಾನ, ರಂಗಸಮುದ್ರ ಗ್ರಾಮದ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನ, ಕ್ಯಾತಗಾನಚರ್ಲು ಗ್ರಾಮದ ಒಂದು ಮನೆ.
ಈ ಭರ್ಜರಿ ಕಾರ್ಯಾಚರಣೆಯಲ್ಲಿ ತುಮಕೂರು ಜಿಲ್ಲಾ ಎಸ್.ಪಿ. ಕೆ.ವಿ. ಅಶೋಕ್, ಎಎಸ್ಪಿ ಮರಿಯಪ್ಪ, ಅಬ್ದುಲ್ ಖಾದರ್ ಮಾರ್ಗದರ್ಶನ ನೀಡಿದರು. ಡಿವೈಎಸ್ಪಿ ಮಂಜುನಾಥ್ ನೇತೃತ್ವದಲ್ಲಿ ಪಾವಗಡ ಗ್ರಾಮಾಂತರ ಸಿಪಿಐ ಗಿರೀಶ್, ಪಿಎಸ್ ಐ ಮಾಳಪ್ಪ ನಾಯ್ಕೋಡಿ, ಲಕ್ಷ್ಮಣ್, ಸಿಬ್ಬಂದಿಗಳಾದ ಗೋವಿಂದರಾಜು, ಸೋಮು, ಧರ್ಮನಾಯ್ಕ, ಶ್ರೀಕಾಂತ್ ನಾಯ್ಕ, ನಟೇಶ್, ಕೇಶವ್ ಪಾಲ್ಗೊಂಡಿದ್ದರು. ಬಂಧಿತರಿಗೆ ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4