ಬೆಂಗಳೂರು: ಸಾಫ್ಟ್ ವೇರ್ ಎಂಜನಿಯರ್ ಒಬ್ಬರ ಮನೆ ಕೆಲಸಕ್ಕೆ ಸೇರಿಕೊಂಡ ಮರು ದಿನವೇ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಮುಂಬೈನ ಇಬ್ಬರು ಮಹಿಳೆಯರನ್ನು ಬೆಳ್ಳಂದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ವನಿತಾ(38) ಮತ್ತು ಯಶೋಧಾ(40) ಬಂಧಿತರು. ಆರೋಪಿಗಳಿಂದ 127 ಗ್ರಾಂ ತೂಕದ ಚಿನ್ನದ ಗಟ್ಟಿ ಜಪ್ತಿ ಮಾಡಲಾಗಿದೆ. ಇಬ್ಬರು ಆರೋಪಿಗಳು, ಮನೆ ಕೆಲಸದವರ ಸೋಗಿನಲ್ಲಿ ಚಿನ್ನಾಭರಣ ಕಳವು ಮಾಡಿ ಪರಾರಿ ಆಗಿದ್ದರು.


