ತಮಿಳುನಾಡು ಚೆನ್ನೈ : ತಿನ್ನುತ್ತಿದ್ದಾಗ ಬಿರಿಯಾನಿ ಸ್ವಲ್ಪ ಕೊಡ್ರಿ ಎಂದು ಕೇಳಿದ್ದಕ್ಕೆ ಪತ್ನಿಯನ್ನೇ ಬೆಂಕಿ ಹಚ್ಚಿದ ಪತಿ ನಂತರ ಆಕೆಯನ್ನೂ ತಬ್ಬಿಕೊಂಡು ನಂದಿಸಲು ಹೋಗಿ ಮೃತಪಟ್ಟ ಆಘಾತಕಾರಿ ಘಟನೆ ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ನಡೆದಿದೆ.
74 ವರ್ಷದ ಪತಿ ಬೆಂಕಿ ಹಚ್ಚಿದ ಬಳಿಕ ಪತ್ನಿಯನ್ನು ಅಪ್ಪಿಕೊಂಡಿದ್ದಾನೆ. ಇದರಿಂದ ಇಬ್ಬರೂ ಸುಟ್ಟ ಗಾಯಗಳಿಂದ ನರಳುತ್ತಿದ್ದರು. ಶೋಚನೀಯ ಸ್ಥಿತಿಯಲ್ಲಿದ್ದ ಇಬ್ಬರನ್ನೂ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರೂ ಮೃತಪಟ್ಟಿದ್ದಾರೆ.
ಚೆನ್ನೈನ ಅಯನವರಂನ ಟ್ಯಾಗೊ ನಿವಾಸಿಗಳಾದ ನಿವೃತ್ತ ರೈಲ್ವೆ ನೌಕರ ಕರುಣಾಕರನ್ ಮತ್ತು ಪತ್ನಿ ಪದ್ಮಾವತಿ ಮೃತ ನಿವಾಸಿಗಳು.
ದಂಪತಿಗೆ 4 ಮಕ್ಕಳಿದ್ದು ನಗರದ ವಿವಿಧ ಭಾಗಗಳಲ್ಲಿ ವಾಸಿಸುತ್ತಿದ್ದು, ಸೋಮವಾರ ರಾತ್ರಿ ದಂಪತಿಯ ಮನೆಯಿಂದ ಕಿರುಚಾಟವನ್ನು ಕೇಳಿದ ನೆರೆಹೊರೆಯವರು ಅಲ್ಲಿಗೆ ಓಡಿಬಂದರು. ಗಂಡ ಹೆಂಡತಿ ಸುಟ್ಟು ಕರಕಲಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪೊಲೀಸರು ಈ ಪ್ರಕರಣವನ್ನು ಆತ್ಮಹತ್ಯೆ ಎಂದು ಪರಿಗಣಿಸುತ್ತಿದ್ದರು. ಆದರೆ ಆಸ್ಪತ್ರೆಯಲ್ಲಿ ಸಾಯುವ ಮೊದಲು ಪದ್ಮಾವತಿ ನೀಡಿದ ಕಾರಣ ತುಂಬಾ ಭಯಾನಕವಾಗಿದೆ.
ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ ಕರುಣಾಕರನ್ ಬಿರಿಯಾನಿ ಖರೀದಿಸಿ ಒಬ್ಬರೇ ತಿನ್ನಲು ಆರಂಭಿಸಿದ್ದರು. ನನಗೆ ಯಾಕೆ ಬಿರಿಯಾನಿ ತಂದಿಲ್ಲ ಎಂದು ಪದ್ಮಾವತಿ ಕರುಣಾಕರನ್ ಅವರಿಗೆ ಕೇಳಿದ್ದಾರೆ. ಅಲ್ಲದೆ ಗಂಡ ತಿನ್ನುತ್ತಿದ್ದ ಬಿರಿಯಾನಿ ಕೊಡುವಂತೆ ಕೇಳಿದ್ದರು. ಈ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆಯಿತು. ಇದೇ ವೇಳೆ ಕೋಪಗೊಂಡ ಕರುಣಾಕರನ್ ನನ್ನ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದರು ಎಂದು ಪದ್ಮಾವತಿ ಹೇಳಿದ್ದಾರೆ.
ಅಯನವರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ದಂಪತಿಯ ನಾಲ್ವರು ಮಕ್ಕಳು ನಗರದ ವಿವಿಧ ಪ್ರದೇಶಗಳಲ್ಲಿ ವಾಸವಿದ್ದರು. ಮಕ್ಕಳು ಜೊತೆಗಿಲ್ಲದ ಕಾರಣ ಇಬ್ಬರೂ ಚಿಂತಾಕ್ರಾಂತರಾಗಿ ಸದಾ ಜಗಳವಾಡುತ್ತಿದ್ದರು. ಕರುಣಾಕರನ್ ಶೇ.50 ಮತ್ತು ಅವರ ಪತ್ನಿ ಶೇ. 65 ಸುಟ್ಟು ಹೋಗಿದ್ದರು. ಇದಾದ ಬಳಿಕ ಪದ್ಮಾವತಿ ಮಂಗಳವಾರ ಮೃತಪಟ್ಟರೆ ಕರುಣಾಕರನ್ ಬುಧವಾರ ಬೆಳಗ್ಗೆ ಸಾವಿಗೀಡಾಗಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy