ಹಲವು ಸರ್ಕಾರಿ ರಜೆಗಳು ಎಲ್ಲಾ ಖಾಸಗಿ ಮತ್ತು ಸರ್ಕಾರಿ ಬ್ಯಾಂಕ್‌ಗಳಿಗೆ ಅನ್ವಯವಾಗುತ್ತವೆ. ಮುಂದಿನ ತಿಂಗಳು ಆಗಸ್ಟ್‌ನಲ್ಲಿ ಬ್ಯಾಂಕ್‌ಗಳು ಬರೋಬ್ಬರಿಗೆ 14 ದಿನ ಬಾಗಿಲು ಮುಚ್ಚಿವೆ.ಆಗಸ್ಟ್ ತಿಂಗಳಲ್ಲಿ ಮೂರು ಪ್ರಮುಖ ಹಬ್ಬಗಳು ಬರುತ್ತವೆ. ರಕ್ಷಾ ಬಂಧನ, ಜನ್ಮಾಷ್ಠಮಿ ಮತ್ತು ಸ್ವತಂತ್ರ ದಿನಾಚರಣೆಗಳಿಗೆ ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ. ಮೂರು ಹಬ್ಬಗಳ ಜೊತೆ ನಾಲ್ಕು ಭಾನುವಾರ ಮತ್ತು ಎರಡು ಶನಿವಾರ ಸೇರಿಸಿದ್ರೆ 10 ರಜೆ ಆಗುತ್ತದೆ. ಇನ್ನುಳಿದ ನಾಲ್ಕು ರಜೆ ಯಾವುದು ಎಂಬುದರ ಮಾಹಿತಿ ಇಲ್ಲಿದೆ ನೋಡಿ.
ಆಗಸ್ಟ್ 2024- ಬ್ಯಾಂಕ್ ರಜಾದಿನಗಳ ಪಟ್ಟಿ:
ಆಗಸ್ಟ್ 3: ಅಗರ್ತಲಾದಲ್ಲಿ ಕೇರ ಪೂಜೆ ಹಿನ್ನೆಲೆ ಈ ಭಾಗದಲ್ಲಿಯ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.
ಆಗಸ್ಟ್ 4: ಭಾನುವಾರ
ಆಗಸ್ಟ್ 7: ಹರಿಯಾಲಿ ತೀಜ್ ಹಬ್ಬದ ಹಿನ್ನೆಲೆ ಹರಿಯಾಣದ ಬ್ಯಾಂಕ್‌ಗಳಿಗೆ ರಜೆ
ಆಗಸ್ಟ್ 8: ಈ ದಿನದಂದು ಸಿಕ್ಕಿಂನಲ್ಲಿ ತೇದೋಂಗ್ ಲೋರಂ ಫೈಟ್ ಆಚರಿಸಲಾಗುತ್ತದೆ. ಈ ಹಿನ್ನೆಲೆ ಸಿಕ್ಕಿಂನಲ್ಲಿ ಸರ್ಕಾರಿ ರಜೆ ಘೋಷಣೆ ಮಾಡಲಾಗುತ್ತದೆ.
ಆಗಸ್ಟ್ 10: ತಿಂಗಳ ಎರಡನೇ ಶನಿವಾರ
ಆಗಸ್ಟ್ 11: ಭಾನುವಾರ
ಆಗಸ್ಟ್ 13: ಇಂಫಾಲ್‌ನಲ್ಲಿ ದೇಶಭಕ್ತ ದಿನ ಆಚರಣೆ ಮಾಡಲಾಗುತ್ತದೆ. ಈ ದಿನದಂದು ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.
ಆಗಸ್ಟ್ 15: ಸ್ವತಂತ್ರ ದಿನಾಚರಣೆ
ಆಗಸ್ಟ್ 18: ಭಾನುವಾರ
ಆಗಸ್ಟ್ 20: ಶ್ರೀ ನಾರಾಯಣ ಗುರು ಜಯಂತಿ ಹಿನ್ನೆಲೆ ಕೊಚ್ಚಿ ಮತ್ತು ತಿರುವನಂತಪುರದಲ್ಲಿ ರಜೆ ಘೋಷಣೆ ಮಾಡಲಾಗುತ್ತದೆ.
ಆಗಸ್ಟ್ 24: ನಾಲ್ಕನೇ ಶನಿವಾರ
ಆಗಸ್ಟ್ 25: ಭಾನುವಾರ
ಆಗಸ್ಟ್ 24: ಇಡೀ ದೇಶದ ತುಂಬೆಲ್ಲಾ ಕೃಷ್ಣ ಜನ್ಮಷ್ಠಾಮಿಯನ್ನು ಆಚರಣೆ ಮಾಡಲಾಗುತ್ತದೆ. ಹಾಗಾಗಿ ದೇಶದ ಎಲ್ಲಾ ಭಾಗಗಳಲ್ಲಿಯೂ ಸರ್ಕಾರಿ ರಜೆ ಇರುತ್ತದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA