ತುಮಕೂರು: ಕ್ಯಾತ್ಸಂದ್ರ ಮೈದಾನ ರಸ್ತೆಯಲ್ಲಿ ಬುಧವಾರ ಬೆಳಂಬೆಳಿಗ್ಗೆಯೇ ವೃದ್ಧೆ ಪಾರ್ವತಮ್ಮ ಅವರ ಚಿನ್ನದ ಸರವನ್ನು ಕಳ್ಳ ಕಿತ್ತೊಯ್ದ ಘಟನೆ ನಡೆದಿದೆ.
ಬೆಳಗ್ಗೆ 6.30ರ ಸಮಯದಲ್ಲಿ ಆಗತಾನೇ ಅಂಗಡಿ ತೆರೆಯುತ್ತಿದ್ದ ವೃದ್ಧೆ ಪಾರ್ವತಮ್ಮ ಅವರ ಬಳಿ ಬಂದ ಅಪರಿಚಿತ ಗುಟ್ಕಾ ಖರೀದಿಸುವ ನೆಪದಲ್ಲಿ ವೃದ್ಧೆ ಗಮನ ಬೇರೆಡೆ ಸೆಳೆದು ಅವರ ಕುತ್ತಿಗೆಯಲ್ಲಿದ್ದ ಸರ ಕೀಳಲು ಯತ್ನಿಸಿದ್ದಾನೆ.
ಈ ವೇಳೆ ಕೂಗಾಡಿದರೂ ಬಿಡದ ಕಳ್ಳ ಅವರನ್ನು ನೆಲಕ್ಕೆ ಬೀಳಿಸಿ ಅರ್ಧ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಘಟನೆ ದೃಶ್ಯಾವಳಿ ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದ್ದು, ಕ್ಯಾತ್ಸಂದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


