ತುರುವೇಕೆರೆ: ಬಾಣಸಂದ್ರ ರಸ್ತೆಯಲ್ಲಿರುವ ಶ್ರೀಶಾರದಾ ಹಾರ್ಡ್ ವೇರ್ ಮತ್ತು ಎಲೆಕ್ಟ್ರಿಕ್ ಅಂಗಡಿಯಲ್ಲಿ ಕಳ್ಳರು ಶಟರ್ ಬೀಗ ಮುರಿದು ಲಕ್ಷಾಂತರ ಮೌಲ್ಯದ ಕೇಬಲ್ ವಯರ್ ಮತ್ತು ನಗದು ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.
ಪಟ್ಟಣದ ಹೃದಯಬಾಗದಲ್ಲಿರುವ ಬೀದರ್ ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ 150 ಎ ನ ಪೋಸ್ಟ್ ಆಫೀಸ್ ಗೆ ಹೊಂದಿಕೊಂಡಂತಿರುವ ಅಂಗಡಿಗೆ ತಡರಾತ್ರಿ ಕಳ್ಳರು ನುಗ್ಗಿ ಸುಮಾರು 3 ಲಕ್ಷ ಮೌಲ್ಯದ ವಿದ್ಯುತ್ ಉಪಕರಣ ಹಾಗೂ 35 ಸಾವಿರ ನಗದನ್ನು ಮತ್ತು ಸಿ.ಸಿ. ಟಿವಿ ಕ್ಯಾಮೆರಾದ ಡಿವಿಆರ್ ಹೊತ್ತೊಯ್ದಿದ್ದಾರೆ.
ಅಂಗಡಿಯ ಮಾಲೀಕ ಮಾಧುರಾಂ ಎಂದಿನಂತೆ ರಾತ್ರಿ 10 ಘಂಟೆಗೆ ಬೀಗ ಹಾಕಿ ಮನೆಗೆ ತೆರಳಿದ್ದಾರೆ. ತಡರಾತ್ರಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ, ಬೆಳಗ್ಗೆ ಮಾಲೀಕ ಅಂಗಡಿಯನ್ನು ತೆರೆಯಲು ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸ್ಥಳಕ್ಕೆ ಡಿ. ವೈ. ಎಸ್. ಪಿ ಲಕ್ಷ್ಮಿಕಾಂತ್ , ಎಸ್.ಐ. ಗಳಾದ ಗಣೇಶ್, ರಾಮಚಂದ್ರಪ್ಪ ಮತ್ತು ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಹೆಚ್ಚಿನ ತನಿಖೆ ನಡೆಸಿದ್ದಾರೆ.
ಈ ಹಿಂದೆಯೂ ಸಹ ಅಂಗಡಿ ಕಳ್ಳತನಗಳು ನೆಡೆದಿದ್ದು ಇಂತಹ ಪ್ರಕರಣಗಳು ಪದೇ ಪದೇ ನೆಡೆಯುತ್ತಿರುವುದು ಸಾರ್ವಜನಿಕರ ನಿದ್ದೆ ಕೆಡಿಸಿವೆ. ಇಂತಹ ಘಟನೆಗಳು ನಡೆಯಲು ಪಟ್ಟಣದ ವೃತ್ತಗಳಲ್ಲಿರುವ ಲಕ್ಷಾಂತರ, ರೂಪಾಯಿ ಮೌಲ್ಯದ ಸಿ ಸಿ ಟಿವಿ ಕ್ಯಾಮೆರಾಗಳು ಅಗತ್ಯ ನಿರ್ವಹಣೆಯಿಲ್ಲದೆ. ಕಾರ್ಯ ನಿರ್ವಹಿಸದೇ ಇರುವುದು ಕಾರಣವಾಗಿದೆ. ಇದರ ನಿರ್ವಹಣೆಯನ್ನು ಸಂಬಂಧಪಟ್ಟವರು ಹಾಗೂ ಪೊಲೀಸ್ ಇಲಾಖೆ ಮಾಡುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


