ಭಾರತಕ್ಕೆ ಸ್ವಾತಂತ್ರ್ಯ ಬಂದು 77 ವರ್ಷಗಳು ಕಳೆದರೂ, ಒಂದು ರೈಲು ಮಾರ್ಗ ಇನ್ನೂ ಬ್ರಿಟಿಷ್ ಕಂಪನಿಯ ನಿಯಂತ್ರಣದಲ್ಲಿದೆ. ಈ ಮಾರ್ಗವನ್ನು ಖರೀದಿಸಲು ಭಾರತೀಯ ರೈಲ್ವೆ ಹಲವು ಪ್ರಯತ್ನಗಳನ್ನು ಮಾಡಿದರೂ ಯಶಸ್ವಿಯಾಗಿಲ್ಲ.
ಮಹಾರಾಷ್ಟ್ರದಲ್ಲಿರುವ ಒಂದು ರೈಲು ಮಾರ್ಗವನ್ನು ಇನ್ನೂ ಬ್ರಿಟಿಷ್ ಕಂಪನಿ ನಿರ್ವಹಿಸುತ್ತಿದೆ. ಈ ರೈಲು ಮಾರ್ಗವನ್ನು ಖರೀದಿಸಲು ಭಾರತೀಯ ರೈಲ್ವೆ ಹಲವು ಪ್ರಯತ್ನಗಳನ್ನು ಮಾಡಿದರೂ ಅದು ಫಲ ನೀಡಿಲ್ಲ. ಸೆಂಟ್ರಲ್ ಪ್ರಾವಿನ್ಸ್ ರೈಲ್ವೆಯ ಬ್ರಿಟಿಷ್ ಕಂಪನಿಯಾದ ‘ಕಿಲ್ಲಿಕ್ ನಿಕ್ಸನ್ & ಕೋ’ ಕಂಪನಿಯೇ ಇನ್ನೂ ನಿರ್ವಹಿಸುತ್ತಿದೆ.
ಈ ಕಂಪನಿ ಮಹಾರಾಷ್ಟ್ರದಲ್ಲಿರುವ ಅಮರಾವತಿಯಿಂದ ಮುರ್ತಾಜಾಪುರದವರೆಗಿನ 190 ಕಿಲೋಮೀಟರ್‌ಗಳ ರೈಲು ಮಾರ್ಗದಲ್ಲಿ ಶಕುಂತಲಾ ಎಕ್ಸ್‌ಪ್ರೆಸ್ ಅನ್ನು ನಿರ್ವಹಣೆ ಮಾಡುತ್ತಿತ್ತು. ಸ್ವಾತಂತ್ರ್ಯ ಬಂದ ನಂತರ ಬ್ರಿಟಿಷರು ಭಾರತದಿಂದ ಹೊರಟು ಹೋದರು. ಆದರೂ, ಈ ಮಾರ್ಗದ ಮೇಲೆ ಬ್ರಿಟಿಷ್ ಖಾಸಗಿ ಕಂಪನಿಯ ಅಧಿಕಾರ ಮುಂದುವರೆದಿದೆ. ಆ ಕಂಪನಿಗೆ ಭಾರತೀಯ ರೈಲ್ವೆ 1.20 ಕೋಟಿ ರೂಪಾಯಿ ರಾಯಲ್ಟಿಯನ್ನು ನೀಡುತ್ತಿದೆ.
ಅಮರಾವತಿಯಿಂದ ಮುರ್ತಾಜಾಪುರದವರೆಗಿನ 190 ಕಿಲೋಮೀಟರ್‌ಗಳಷ್ಟಿರುವ ಈ ರೈಲು ಮಾರ್ಗವನ್ನು ಸ್ವಾಧೀನಪಡಿಸಿಕೊಳ್ಳಲು ಭಾರತೀಯ ರೈಲ್ವೆ ಹಲವು ಪ್ರಯತ್ನಗಳನ್ನು ಮಾಡಿದೆ. ಆದರೆ, ಅವು ಫಲ ನೀಡಿಲ್ಲ. ಈ ರೈಲು ಮಾರ್ಗದಲ್ಲಿ ಶಕುಂತಲಾ ಪ್ಯಾಸೆಂಜರ್ ಎಂಬ ಒಂದೇ ಒಂದು ಪ್ರಯಾಣಿಕರ ರೈಲು ಸಂಚರಿಸುತ್ತಿತ್ತು. ಇದರಿಂದಾಗಿ ಈ ಮಾರ್ಗವನ್ನು ಶಕುಂತಲಾ ರೈಲು ಮಾರ್ಗ ಎಂದು ಕರೆಯಲಾಗುತ್ತದೆ. ಶಕುಂತಲಾ ಎಕ್ಸ್‌ಪ್ರೆಸ್ ಅಚಲ್‌ಪುರ, ಯಾವತ್ಮಾಲ್ ನಡುವೆ 17 ನಿಲ್ದಾಣಗಳಲ್ಲಿ ನಿಲ್ಲುತ್ತಿತ್ತು. ಸುಮಾರು 70 ವರ್ಷಗಳ ಕಾಲ ಈ ರೈಲು ಸ್ಟೀಮ್ ಇಂಜಿನ್‌ನಲ್ಲಿಯೇ ಸಂಚಾರ ಮಾಡಿತ್ತು.
ಮಹಾರಾಷ್ಟ್ರದ ಅಮರಾವತಿಯಲ್ಲಿ ಹತ್ತಿಯನ್ನು ಬೆಳೆಯಲಾಗುತ್ತದೆ. ಹತ್ತಿಯನ್ನು ಅಮರಾವತಿಯಿಂದ ಮುಂಬೈ ಬಂದರಿಗೆ ಸಾಗಿಸಲು ಬ್ರಿಟಿಷರು ಈ ರೈಲು ಮಾರ್ಗವನ್ನು ನಿರ್ಮಿಸಿದರು. ಸೆಂಟ್ರಲ್ ಪ್ರಾವಿನ್ಸಸ್ ರೈಲ್ವೆ ಕಂಪನಿ (CPRC) ಈ ರೈಲ್ವೆ ನಿರ್ಮಾಣಕ್ಕಾಗಿ ಬ್ರಿಟನ್‌ನ ಕಿಲ್ಲಿಕ್ ನಿಕ್ಸನ್ & ಕೋ ಅನ್ನು ಸ್ಥಾಪಿಸಿತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q