ಕನಕಪುರ ಮುಖ್ಯರಸ್ತೆಯಲ್ಲಿ ಎರಡು ಸಾವಿರ ಮುಖಬೆಲೆಯ ಮೂರು ಬಾಕ್ಸ್ ನೋಟುಗಳು ಪತ್ತೆಯಾಗಿದೆ. ಕನಕಪುರ ರಸ್ತೆಯ ಪಕ್ಕದಲ್ಲಿ ಬಿದ್ದಿದ್ದ ಎರಡು ಬಾಕ್ಸ್ ಹಾಗೂ ಒಂದು ಸೂಟ್ ಕೇಸ್ ನಲ್ಲಿ ಕಲರ್ ಜೆರಾಕ್ಸ್ ನೋಟುಗಳು ಮಂಗಳವಾರ ಪತ್ತೆಯಾಗಿವೆ.
ಸಾರ್ವಜನಿಕರು ನೋಡಿ ಸಂಚಾರಿ ಪೋಲೀಸರ ಗಮನಕ್ಕೆ ತಂದಿದ್ದು, ಸಂಚಾರಿ ಪೊಲೀಸ್ ರಿಂದ ಕೂಡಲೇ ತಲಘಟ್ಟಪುರ ಠಾಣೆ ಪೊಲೀಸಿಗೆ ಮಾಹಿತಿ ಕೊಟ್ಟಿದ್ದರು. ಕೂಡಲೆ ಸ್ಥಳಕ್ಕೆ ಹೋಗಿ ಜೆರಾಕ್ಸ್ ನೋಟುಗಳನ್ನ ಪರಿಶೀಲಿಸಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೆರಾಕ್ಸ್ ನೋಟುಗಳು ಅಲ್ಲಿಗೆ ಹೇಗೆ ಬಂದವು ಎಂಬುದರ ಬಗ್ಗೆ ತಲಘಟ್ಟಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


