nammatumakuru

    Subscribe to Updates

    Get the latest creative news from FooBar about art, design and business.

    What's Hot

    ಪ್ರಪಥಮ ಬಾರಿಗೆ ಸಿದ್ದರಬೆಟ್ಟದಲ್ಲಿ ಅದ್ದೂರಿ ಮಹಾ ಶಿವರಾತ್ರಿ ಜಾಗರಣೆ ಮಹೋತ್ಸವ

    February 10, 2026

    ತಿಪಟೂರು: ನಿರ್ಗತಿಕರಿಗೆ ಆಸರೆಯಾದ ಧರ್ಮಸ್ಥಳ ಯೋಜನೆ:  201 ಫಲಾನುಭವಿಗಳಿಗೆ ಮಾಶಾಸನ, ‘ವಾತ್ಸಲ್ಯ ಕಿಟ್’ ವಿತರಣೆ

    February 10, 2026

    ನಮ್ಮಲ್ಲೆಲ್ಲ ಯುಸ್ ಲೆಸ್ ಆಫೀಸರ್ ಗಳು: ಡಿ.ಸಿ. ಎದುರೇ ಹರಿಹಾಯ್ದ ಕೆ.ಎನ್.ರಾಜಣ್ಣ

    February 10, 2026
    Facebook Twitter Instagram
    ಟ್ರೆಂಡಿಂಗ್
    • ಪ್ರಪಥಮ ಬಾರಿಗೆ ಸಿದ್ದರಬೆಟ್ಟದಲ್ಲಿ ಅದ್ದೂರಿ ಮಹಾ ಶಿವರಾತ್ರಿ ಜಾಗರಣೆ ಮಹೋತ್ಸವ
    • ತಿಪಟೂರು: ನಿರ್ಗತಿಕರಿಗೆ ಆಸರೆಯಾದ ಧರ್ಮಸ್ಥಳ ಯೋಜನೆ:  201 ಫಲಾನುಭವಿಗಳಿಗೆ ಮಾಶಾಸನ, ‘ವಾತ್ಸಲ್ಯ ಕಿಟ್’ ವಿತರಣೆ
    • ನಮ್ಮಲ್ಲೆಲ್ಲ ಯುಸ್ ಲೆಸ್ ಆಫೀಸರ್ ಗಳು: ಡಿ.ಸಿ. ಎದುರೇ ಹರಿಹಾಯ್ದ ಕೆ.ಎನ್.ರಾಜಣ್ಣ
    • ಅರಣ್ಯ ಇಲಾಖೆಯ ಬೋನಿಗೆ ಬಿದ್ದ ಚಿರತೆ: ನಿಟ್ಟುಸಿರು ಬಿಟ್ಟ ಕಾವಲುಬೀಳು ಗ್ರಾಮಸ್ಥರು
    • ಕೇಂದ್ರ ಸರ್ಕಾರದ ಧೋರಣೆ ವಿರೋಧಿಸಿ ಫೆ.12ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ
    • ಸಿಎಂ ಬದಲಾವಣೆ ವಿಚಾರ ನನಗಂತೂ ಗೊತ್ತಿಲ್ಲ: ಶಾಸಕ ಎಸ್.ಆರ್.ಶ್ರೀನಿವಾಸ್
    • ಹಿಂದೂ ಕೇವಲ ಧರ್ಮವಲ್ಲ, ಜೀವನ ದರ್ಶನ: ಸಿದ್ಧರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ
    • ರೈತರು ತಮ್ಮ ಜಮೀನು ಮಾರಾಟ ಮಾಡಬೇಡಿ: ಶಾಸಕ ಬಿ.ಸುರೇಶ್ ಗೌಡ ಕಿವಿಮಾತು
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ತುಮಕೂರಲ್ಲಿ ರಸ್ತೆ ಗುಂಡಿಗಳೇ ಇಲ್ಲವಂತೆ..! ಹೈಕೋರ್ಟ್‌ಗೆ ಮಹಾನಗರ ಪಾಲಿಕೆ ವರದಿ ಸಲ್ಲಿಕೆ
    ತುಮಕೂರು August 9, 2022

    ತುಮಕೂರಲ್ಲಿ ರಸ್ತೆ ಗುಂಡಿಗಳೇ ಇಲ್ಲವಂತೆ..! ಹೈಕೋರ್ಟ್‌ಗೆ ಮಹಾನಗರ ಪಾಲಿಕೆ ವರದಿ ಸಲ್ಲಿಕೆ

    By adminAugust 9, 2022No Comments2 Mins Read
    thumakur

    ತುಮಕೂರು: ಸ್ಮಾರ್ಟ್‌ಸಿಟಿ ತುಮಕೂರಲ್ಲಿ ರಸ್ತೆಗುಂಡಿಗಳೇ ಇಲ್ಲ! ಗುಂಡಿ ಮುಕ್ತ ಮಹಾನಗರ! ಹೀಗಂತ ಸ್ವತಃ ಮಹಾನಗರ ಪಾಲಿಕೆ ಘೋಷಿಸಿದೆ. ಇದು ಬರೀ ಘೋಷಣೆಯಲ್ಲ ಹೈಕೋರ್ಟ್‌ಗೆ ಸಲ್ಲಿಸಿರುವ ವರದಿ! ಆದರೆ, ಮಹಾನಗರ ಪಾಲಿಕೆ ಒಮ್ಮೆ ಬಿಡುವು ಮಾಡಿಕೊಂಡು ನಗರ ಪರ್ಯಟನೆ ಮಾಡಿದರೆ ಗುಂಡಿಗಳ ದಿಗ್ದರ್ಶನವಾಗುತ್ತದೆ. ಆದರೂ ಯಾವ ಮಾನದಂಡದಡಿ ಬಣ್ಣ-ಬಣ್ಣ ಛಾಯಾಚಿತ್ರಗಳ ಸಹಿತ ನ್ಯಾಯಾಲಯಕ್ಕೆ ವರದಿ ಸಲ್ಲಿಸಿತು ಎಂಬುದು ಪ್ರಶ್ನೆ.

    ಮಹಾನಗರ ಪಾಲಿಕೆ ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ. ಯಾವುದೇ ಗುಂಡಿಗಳು ಕಂಡುಬಂದರೆ ಸಾರ್ವಜನಿಕರು ಗಮನಕ್ಕೆ ತಂದರೆ ಕೂಡಲೇ ಬಗೆಹರಿಸುವುದಾಗಿ ಪಾಲಿಕೆ ಹೇಳಿದೆ. ನಗರದ ಕುಣಿಗಲ್‌ ರಸ್ತೆ ಸೇರಿದಂತೆ ನಾನಾ ಮುಖ್ಯ ರಸ್ತೆಗಳು, ರಸ್ತೆಗಳು ಗುಂಡಿಮಯವಾಗಿವೆ. ಇದು ಪಾಲಿಕೆ ಕಣ್ಣಿಗೆ ಕಾಣದಿರುವುದು ಆಶ್ಚರ್ಯ.


    Provided by
    Provided by

    ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಿಸುವ ಸಂಬಂಧ ಕದರನಹಳ್ಳಿ ತಾಂಡ್ಯದ ವಕೀಲ, ಜನಪರ ಹೋರಾಟಗಾರ ರಮೇಶ್‌ನಾಯಕ್‌. ಎಲ್‌. 2021 ನವೆಂಬರ್‌ನಲ್ಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಹೈಕೋರ್ಟ್‌ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಮಹಾನಗರ ಪಾಲಿಕೆಗೆ ನೋಟಿಸ್‌ ನೀಡಿತ್ತು.ಮಹಾನಗರ ಪಾಲಿಕೆ ಪ್ರಮುಖ ರಸ್ತೆಗಳ ಫೋಟೋ ಸಹಿತ ರಸ್ತೆ ಗುಂಡಿ ಮುಚ್ಚಿರುವ ಬಗ್ಗೆ ಹೈಕೋರ್ಟ್‌ಗೆ ವರದಿ ಸಲ್ಲಿಸಿದೆ.

    ಕರೆ ಮಾಡಿದರೆ ಕ್ರಮ: ತುಮಕೂರು ನಾಗರಿಕರು ರಸ್ತೆ ಗುಂಡಿಗಳ ಬಗ್ಗೆ ದೂರುಗಳಿದ್ದರೆ 0816-2272200ಗೆ ಕರೆ ಮಾಡಬಹುದು ಅಥವಾ ಮೊಬೈಲ್‌ 9449872599 ಸಂಪರ್ಕಿಸಬಹುದು. ಈ ಸಂಖ್ಯೆಗಳನ್ನು ನಗರದ ಎಲ್‌ಇಡಿ ಫಲಕದಲ್ಲೂ ಪ್ರಸಾರ ಮಾಡಲಾಗುತ್ತಿದೆ ಎಂದು ಮಹಾನಗರ ಪಾಲಿಕೆ ವರದಿಯಲ್ಲಿ ತಿಳಿಸಿದೆ. ಸಾರ್ವಜನಿಕರು ರಸ್ತೆ ಗುಂಡಿಗಳ ಬಗ್ಗೆ ಪಾಲಿಕೆಯ ಕಣ್ತೆರೆಸಬೇಕಿದೆ.

    ಆಕ್ಷೇಪಣೆಗೆ ಸಲ್ಲಿಕೆಗೆ ನಿರ್ಧಾರ: ಹೊಸ ರಸ್ತೆಗಳ ಬಣ್ಣ-ಬಣ್ಣದ ಫೋಟೋಗಳ ಸಹಿತ ಮಹಾನಗರ ಪಾಲಿಕೆ ಹೈಕೋರ್ಟ್‌ಗೆ ವರದಿ ಸಲ್ಲಿಸಿದೆ. ನಾನಾ ಕಡೆಗಳಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಿದ್ದಾರೆ ನಿಜ. ಆದರೆ, ನಗರ ಇನ್ನೂ ‘ರಸ್ತೆ ಗುಂಡಿ ಮುಕ್ತ’ವಾಗಿಲ್ಲ. ಹೀಗಾಗಿ ರಿಯಾಲಿಟಿ ಚೆಕ್‌ ನಡೆಸಿದ್ದೇನೆ. ಈ ಬಗ್ಗೆ ಆಧಾರಸಹಿತ ಆಕ್ಷೇಪಣೆ ಸಲ್ಲಿಸುವುದಾಗಿ ವಕೀಲ ರಮೇಶ್‌ನಾಯಕ್‌.ಎಲ್‌. ತಿಳಿಸಿದ್ದಾರೆ. ಅಲ್ಲದೆ ಸಾರ್ವಜನಿಕರು ಮಹಾನಗರ ಪಾಲಿಕೆ ಗಮನಕ್ಕೆ ರಸ್ತೆ ಗುಂಡಿಗಳ ಬಗ್ಗೆ ತಿಳಿಸಿ ಗುಂಡಿ ಮುಕ್ತ ನಗರವನ್ನಾಗಿಸುವ ಹೋರಾಟಕ್ಕೆ ಸಹಕರಿಸಿ ಎಂದು ಕಳಕಳಿ ವ್ಯಕ್ತಪಡಿಸಿದ್ದಾರೆ.
    ರಸ್ತೆ ಗುಂಡಿಗಳಿಗೇನು ಬರವಿಲ್ಲ!

    ಮಹಾನಗರ ಪಾಲಿಕೆ ಯಾವ ಲೆಕ್ಕಾಚಾರದಲ್ಲಿ ಗುಂಡಿಗಳನ್ನು ಮುಚ್ಚಿದ್ದೇವೆ ಎಂದು ವರದಿ ಸಲ್ಲಿಸಿದೆಯೋ ಗೊತ್ತಿಲ್ಲ. ಆದರೆ, ನಗರದ ಪ್ರಮುಖ ರಸ್ತೆಗಳಲ್ಲೇ ಸಾಕಷ್ಟು ಗುಂಡಿಗಳಿವೆ. ವಾಹನಗಳು ಓಡಾಡದ ದುಸ್ಥಿತಿಯೂ ಇದೆ.
    ಮುಖ್ಯಾಂಶಗಳು

    – ರಸ್ತೆ ಗುಂಡಿಗಳ ಬಗ್ಗೆ ಹೈಕೋರ್ಟ್‌ಗೆ ಮಹಾನಗರ ಪಾಲಿಕೆ ವರದಿ ಸಲ್ಲಿಕೆ
    – ಗುಂಡಿಗಳಿಗೆ ಮುಕ್ತಿ ಹಾಡಿರುವುದಾಗಿ ಚಿತ್ರಸಹಿತ ವರದಿ
    – ರಸ್ತೆ ಗುಂಡಿಗಳಿದ್ದರೆ 0816-2272200 ಅಥವಾ 9449872599 ಸಂಪರ್ಕಿಸುವಂತೆ ತಿಳಿಸಿರುವ ಮಹಾನಗರ ಪಾಲಿಕೆ
    – ಆಕ್ಷೇಪಣೆ ಸಲ್ಲಿಕೆಗೆ ವಕೀಲ ರಮೇಶ್‌ನಾಯಕ್‌.ಎಲ್‌. ನಿರ್ಧಾರ
    ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ. ಈ ಬಗ್ಗೆ ಕೈಗೊಂಡಿರುವ ಕ್ರಮದ ಬಗ್ಗೆ ಹೈಕೋರ್ಟ್‌ಗೆ ವರದಿ ಸಲ್ಲಿಸಿದ್ದೇವೆ. ಇನ್ನೂ ಎಲ್ಲಾದರೂ ರಸ್ತೆ ಗುಂಡಿಗಳು ಕಂಡು ಬಂದರೆ ಸಾರ್ವಜನಿಕರು ಗಮನಕ್ಕೆ ತಂದರೆ ಕೂಡಲೇ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮವಹಿಸುತ್ತೇವೆ ಎಂದು ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದ್ರು.
    ಇನ್ನು ರಸ್ತೆಗುಂಡಿಗಳನ್ನು ಮುಚ್ಚಿದ್ದೇವೆಂದು ಹೈಕೋರ್ಟ್‌ಗೆ ಮಹಾನಗರ ಪಾಲಿಕೆ ವರದಿ ನೀಡಿದೆ. ಆದರೆ, ನಗರದಾದ್ಯಂತ ಇನ್ನೂ ಮರಣ ಗುಂಡಿಗಳಾಗಿರುವ ರಸ್ತೆ ಗುಂಡಿಗಳಿವೆ. ಹೀಗಾಗಿ ಆಕ್ಷೇಪಣೆ ಸಲ್ಲಿಸುತ್ತಿದ್ದೇನೆ ಎಂದು ಹೈಕೋರ್ಟ್‌ ವಕೀಲ ರಮೇಶ್‌ನಾಯಕ್‌.ಎಲ್‌. ಹೇಳಿದ್ರು.

    ವರದಿ ಆಂಟೋನಿ ಬೇಗೂರು

    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

    admin
    • Website

    Related Posts

    ರೈತರು ತಮ್ಮ ಜಮೀನು ಮಾರಾಟ ಮಾಡಬೇಡಿ: ಶಾಸಕ ಬಿ.ಸುರೇಶ್ ಗೌಡ ಕಿವಿಮಾತು

    February 10, 2026

    ನವಜಾತ ಶಿಶುಗಳ ಆರೈಕೆ ಬಲಪಡಿಸಲು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಶಿಫಾರಸ್ಸು

    February 10, 2026

    ತುಮಕೂರು: ಬಾಣಾವರ ಗೇಟ್ ಬಳಿ ಭೀಕರ ಸರಣಿ ಅಪಘಾತ; ಮಾಜಿ ತಾಪಂ ಸದಸ್ಯ ಸೇರಿ ಇಬ್ಬರು ಸಾವು

    February 9, 2026

    Comments are closed.

    Our Picks

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026

    ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಬೀದರ್ ವರೆಗೆ ವಿಸ್ತರಿಸಿ: ರೈಲ್ವೆ ಸಚಿವರಿಗೆ ದೇವೇಗೌಡರ ಮನವಿ

    February 6, 2026

    ಜೀವನದಲ್ಲಿ ಕೊನೆಯ ಹಂತದಲ್ಲಿದ್ದೇನೆ, ನೀರಾವರಿ ಯೋಜನೆಗಳಿಗೆ ಅನುಮೋದನೆ ಕೊಡಿ: ಹೆಚ್.ಡಿ. ದೇವೇಗೌಡ ಗದ್ಗದಿತ

    February 5, 2026

    ದೈಹಿಕ ಸಂಬಂಧದಲ್ಲಿ ತೃಪ್ತಿಯಿಲ್ಲ: ಮದುವೆಯಾದ ಒಂದೇ ತಿಂಗಳಲ್ಲಿ ಗಂಡನನ್ನು ತೊರೆದ ಪತ್ನಿ!

    February 3, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಕೊರಟಗೆರೆ

    ಪ್ರಪಥಮ ಬಾರಿಗೆ ಸಿದ್ದರಬೆಟ್ಟದಲ್ಲಿ ಅದ್ದೂರಿ ಮಹಾ ಶಿವರಾತ್ರಿ ಜಾಗರಣೆ ಮಹೋತ್ಸವ

    February 10, 2026

    ಕೊರಟಗೆರೆ : ಸಿದ್ದರಬೆಟ್ಟದಲ್ಲಿ ಈ ಇದೇ ಮೊದಲ ಬಾರಿಗೆ ಶಿವರಾತ್ರಿ ಹಬ್ಬದ ಜಾಗರಣೆಯನ್ನ ಧರ್ಮ ಪ್ರಚಾರ, ಧರ್ಮದ ಜಾಗೃತಿ, ಹಾಗೂ…

    ತಿಪಟೂರು: ನಿರ್ಗತಿಕರಿಗೆ ಆಸರೆಯಾದ ಧರ್ಮಸ್ಥಳ ಯೋಜನೆ:  201 ಫಲಾನುಭವಿಗಳಿಗೆ ಮಾಶಾಸನ, ‘ವಾತ್ಸಲ್ಯ ಕಿಟ್’ ವಿತರಣೆ

    February 10, 2026

    ನಮ್ಮಲ್ಲೆಲ್ಲ ಯುಸ್ ಲೆಸ್ ಆಫೀಸರ್ ಗಳು: ಡಿ.ಸಿ. ಎದುರೇ ಹರಿಹಾಯ್ದ ಕೆ.ಎನ್.ರಾಜಣ್ಣ

    February 10, 2026

    ಅರಣ್ಯ ಇಲಾಖೆಯ ಬೋನಿಗೆ ಬಿದ್ದ ಚಿರತೆ: ನಿಟ್ಟುಸಿರು ಬಿಟ್ಟ ಕಾವಲುಬೀಳು ಗ್ರಾಮಸ್ಥರು

    February 10, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.