ತುರುವೇಕೆರೆ: ತಾಲೂಕಿನ ತಂಡಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗವಿಪುರ (ಕರೆಕಲ್ ಬಾರೆ) ಗ್ರಾಮದ ಜನರು ಕುಡಿಯುವ ನೀರಿಗಾಗಿ ಆಗ್ರಹಿಸಿ ಪಂಚಾಯಿತಿ ಮುಂಭಾಗ ಖಾಲಿ ಕೊಡ ಹಿಡಿದು ಪ್ರತಿಭಟನೆ ನಡೆಸಿದರು.
ಗ್ರಾಮ ಮುಖಂಡ ಓಂಕಾರಾಚಾರ್ ಮಾತನಾಡಿ, ಈ ಮೊದಲು ಬಹುಗ್ರಾಮ ಕುಡಿಯುವ ಯೋಜನೆಯ ಟ್ಯಾಂಕರ್ ನಿಂದ ನಮ್ಮ ಗ್ರಾಮಕ್ಕೆ ನೀರಿನ ಸಂಪರ್ಕ ಕಲ್ಪಿಸಲಾಗಿತ್ತು, ಈಗ ಅದು ಬಂದ್ ಆಗಿದೆ. ಗ್ರಾಮದ ಎರಡು ಸಿಸ್ಟನ್ ಗಳಿಗೆ ಪಂಚಾಯಿತಿ ಬೋರ್‌ವೆಲ್ ಮೂಲಕ ನೀರು ಬಿಡಲಾಗುತ್ತಿತ್ತು. ಆದರೆ ಪಂಚಾಯಿತಿಯಿಂದ ಬೋರ್‌ವೆಲ್‌ನ ಮೋಟಾರ್ ಪೈಪ್‌ಗಳನ್ನು ಬೇರೆಡೆಗೆ ತೆಗೆದುಕೊಂಡು ಹೋಗಿ, ನೀರು ಇಲ್ಲದಂತೆ ಮಾಡಿದ್ದಾರೆ. ಈಗಾಗಲೇ ಕುಡಿಯುವ ನೀರು ಕಲ್ಪಿಸುವಂತೆ ಗ್ರಾಮ ಪಂಚಾಯಿತಿ ಸದಸ್ಯರಿಗೂ ಹಾಗೂ ಪಿಡಿಒಗೂ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಇಲ್ಲವಾದರೆ ಉಗ್ರವಾದ ಪ್ರತಿಭಟನೆ ಮಾಡಲಾಗುವುದು ಎಂದು ಒತ್ತಾಯಿಸಿದರು.
ಟ್ಯಾಂಕರ್ ನೀರು ಪೂರೈಕೆ: ಪಿಡಿಒ ಭರವಸೆ ಪಿಡಿಒ ಕುಮಾರಸ್ವಾಮಿ ಮಾತನಾಡಿ, ಟ್ಯಾಂಕರ್ ಮೂಲಕ ಕುಡಿಯುವ ನೀರು ಕಲ್ಪಿಸಲಾಗುವುದು. ಮುಂದಿನ ಕೆಲ ದಿನಗಳಲ್ಲಿ ಬೋರ್‌ವೆಲ್‌ಗೆ ಹೊಸ ಮೋಟಾರ್ ಅಳವಡಿಸಿ ನಂತರ ಸಿಸ್ಟನ್‌ಗಳಿಗೆ ನೀರು ಬಿಡಲಾಗುವುದು ಎಂದು ಭರವಸೆ ನೀಡಿದ ನಂತರ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು.
ಪ್ರತಿಭಟನೆಯಲ್ಲಿ ಗೋವಿಂದಪ್ಪ, ಶೀಲಾ, ಪ್ರಮೀಳ, ಶೋಭ, ಗಂಗಾಧರಯ್ಯ, ಪುಟ್ಟಲಕ್ಷ್ಮಮ್ಮ, ನರಸಯ್ಯ, ಜಯಮ್ಮ, ಪ್ರವೀಣ್, ಗೋವಿಂದಪ್ಪ, ರೇಖಾ ಸೇರಿದಂತೆ ಇತರರು ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


