ಶಿಕಾರಿಪುರ ವಿಧಾನಸಭಾ ಕ್ಷೇತ್ರದಿಂದ ಬಿ.ವೈ.ವಿಜಯೇಂದ್ರಗೆ ಟಿಕೆಟ್ ನೀಡುವ ಸುಳಿವನ್ನು ಸಿಎಂ ಬಸವರಾಜ ಬೊಮ್ಮಾಯಿ ನೀಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ನನ್ನ ಕ್ಲಿಸ್ಟ ಪರಿಸ್ಥಿತಿಯಲ್ಲಿ, ಸವಾಲುಗಳನ್ನು ಎದುರಿಸುವಂತ ಶಕ್ತಿ ನೀಡಿದವರು ಬಿ.ಎಸ್.ಯಡಿಯೂರಪ್ಪ. ಅವರ ನನ್ನ ನಡುವೆ ತಂದೆ–ಮಕ್ಕಳ ಸಂಬಂಧವಿದೆ. ಅದು ಎಲ್ಲಾ ಭಾವನೆಯನ್ನು ಮೀರಿದ್ದಾಗಿದೆ ಎಂದರು.
ಶಿಕಾರಿಪುರ ಮತ್ತೆ ಅವರಿಗೆ ಅವಿನಾಭಾವ ಸಂಬಂಧ. ಅವರನ್ನು ನಾನು ಎಷ್ಟು ಬಾರಿ ಮಾತನಾಡಿದರೂ ಶಿಕಾರಿಪುರದ ಅಭಿವೃದ್ಧಿಯ ಬಗ್ಗೆಯೇ ಮಾತನಾಡುತ್ತಾರೆ ಎಂಬುದಾಗಿ ತಿಳಿಸಿದರು.
ಶಿವಶರಣೆ, ವೈಚಾರಿಕ ಕ್ರಾಂತಿ ನಡೆಸಿದ ಅಕ್ಕಮಹಾದೇವಿಯವರ ಪ್ರತಿಮೆ ಸ್ಥಾಪಿಸಿ, ಶಿವಶರಣರಿಗೆ ದೊಡ್ಡ ಕಾಣಿಕೆಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


